ಬೆಳಗಾವಿ,: ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಜಾಢಶಹಾಪೂರ ಹೊನಗಾ ಮತ್ತು ಹಲಗಾ ಮಚ್ಛ ನಡುವೆ ರಿಂಗ್ (ಬಾಯ್ ಪಾಸ್) ರಸ್ತೆ ನಿರ್ಮಾಣ ಹಾಗೂ ಬೆಳಗಾವಿ (ಶಗಣಮಟ್ಟಿ) ಹುನಗುಂದ – ರಾಯಚೂರು ನಡುವೆ ರಸ್ತೆ ನಿರ್ಮಾಣ ಕುರಿತು ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳಾದ ಎಮ್.ಡಿ ರೋಷನ್ ಇವರು ಉಪಸ್ಥಿತಿಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಚರ್ಚೆ ನಡೆಸಿ, ಮಾಹಿತಿ ಪಡೆದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ಹಾಗೂ ಬಾಗಲಕೋಟೆ ಮೇಲೆ ಪ್ರಸ್ತಾಪಿತ ರಸ್ತೆಯ ನಿರ್ಮಾಣಕ್ಕೆ ಅವಶ್ಯವೆನಿಸಿರುವ ಭೂಸ್ವಾಧೀನ ಪ್ರಗತಿ ವರದಿಯನ್ನು ಆಯಾ ಭೂ ಸ್ವಾಧೀನ ಅಧಿಕಾರಿಗಳಿಂದ ಪಡೆದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದ್ದು, ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಸೂಚಿಸಿದರು.
ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ತಲುಪುವ ರಸ್ತೆ ಕಾಮಗಾರಿ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಬೆಳಗಾವಿ ಕಿತ್ತೂರು ಧಾರವಾಡ ನೂತನ ರೈಲು ಮಾರ್ಗದ ಬಗ್ಗೆ ನಡೆಯುತ್ತಿರುವ ಭೂ ಸ್ವಾಧೀನಕ್ಕೆ ಅನುಕೂಲವಾಗುವ Demarcation ಬಗ್ಗೆ ಮಾಹಿತಿಯನ್ನು KAIDB ಧಾರವಾಡ ಅಧಿಕಾರಿಗಳಿಂದ ಪಡೆದುಕೊಂಡು ಈ ಕುರಿತು ಸಾಕಷ್ಟು ಪ್ರಗತಿ ಸಾಧಿಸಿದ್ದು, ಶೀಘ್ರ ಪೂರ್ಣಗೊಳಿಸಲು ಆದೇಶಿಸಿದರು.
ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡದ ಭುವನೇಶಕುಮಾರ, ಬಾಗಲಕೋಟೆಯ ಸೈಯದ್ ಅಮನ್, ವಿಶೇಷ ಭೂ ಸ್ವಾಧೀನ ಅಧಿಕಾರಿಗಳಾದ ರಾಜಶ್ರೀ ಜೈನಾಪೂರ, ಚೌವ್ಹಾಣ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಧಾರವಾಡ ನೇರ ರೈಲು ಮಾರ್ಗ: ಸಭೆ ನಡೆಸಿಸ ಸಂಸದರು
