ಬೆಳಗಾವಿ,:ವಕೀಲರ ವಿರುದ್ಧ ಅಟ್ರಾಸಿಟಿ, ಲೈಂಗಿಕ ಕಿರುಕುಳ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ
ಬೆಳಗಾವಿಯಲ್ಲಿ ಕೋರ್ಟ್ ಕಲಾಪ ಬಹಿಷ್ಕಿರಿಸಿ,ಕೋರ್ಟ ಮುಂದಿನ ರಸ್ತೆ ತಡೆ ಮಾಡಿದ ವಕೀಲರು ಪ್ರತಿಭಟನೆ ನಡೆಸಿದರು.
ಸೋನಿಯಾ ದಾರ ಎಂಬುವವರು ಎಲ್ಎಲ್ಬಿ ಪದವಿ ಪೂರ್ಣಗೊಳಿಸದ್ದನ್ನ ಪ್ರಶ್ನಿಸಿದ್ದ ವಕೀಲ ಬಸವರಾಜ ಜರಳಿ ಅವರು ಸೋನಿಯಾ ವಿರುದ್ಧ ದ್ವಿತೀಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆದರೆ ಇದರ ವಿರುದ್ದವಾಗಿ
ಸೋನಿಯಾ ಅವರು ಜರಳಿ ವಿರುದ್ಧ ಲೈಂಗಿಕ ಕಿರುಕುಳ, ಅಟ್ರಾಸಿಟಿ ಕೇಸ್ ದಾಖಲಿಸಿದರು.
ಕೋರ್ಟ್ ನ ಲಿಫ್ಟ್ ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಿಸಿದರು.
ಸೋನಿಯಾ ಅವರ ದೂರನ್ನು ದಾಖಲಿಸಿಕೊಂಡಿದ್ದನ್ನು ಆಕ್ಷೇಪಿಸಿದ ವಕೀಲರು ಪೊಲೀಸರ ವಿರುದ್ಧವೂ ಪ್ರತಿಭಟನೆ ನಡೆಸಿದರು.
ಪೊಲೀಸರು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ ಎನ್ನುತ್ತಾ
ಮಾರ್ಕೆಟ್ ಠಾಣೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ವಕೀಲರ ಮನವೊಲಿಸಲು ಯತ್ನಿಸಿದರು.
ವಕೀಲರ ವಿರುದ್ದ ಸುಳ್ಳು ಪ್ರಕರಣ ದಾಖಲು ಆರೋಪ: ಪ್ರತಿಭಟನೆ
