ಬೆಳಗಾವಿ: 53 ವರುಷದ ಆಟೋ ಚಾಲಕನನ್ನು ಪ್ರಯಾಣಿಕನೊಬ್ಬ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ನ್ಯೂ ಗಾಂಧಿ ನಗರ ಬಳಿರುವ ಎಸ್ ಸಿ ಮೋಟರ್ಸ್ ಹತ್ತಿರ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಉಚಗಾವಿ ಗ್ರಾಮದ ರಿಯಾಜ್ ತಹಶೀಲ್ದಾರ ಎಂಬವರು ಓರ್ವ ಅಪರಿಚಿತ ಪ್ರಯಾಣಿಕನನ್ನು ಕೇಂದ್ರ ಬಸ್ ನಿಲ್ದಾಣದಿಂದ ಅಲಾರವಾಡ ಗ್ರಾಮಕ್ಕೆ ಕರೆದುಕೊಂಡು ಹೊರಟಿದ್ದರು. ಪ್ರಯಾಣದಲ್ಲಿ ಅವರಲ್ಲಿ ಯಾವುದೋ ವಿಷಯಕ್ಕೆ ವಾದವಾಗಿದೆ. ಹಿಂದೆ ಕುಳಿತಿದ್ದ ಪ್ರಯಾಣಿಕ ತನ್ನ ಬಳಿಯಿದ್ದ ಚಾಕುವಿನಿಂದ ರಿಕ್ಷಾ ಚಲಾಯಿಸುತ್ತಿದ್ದ ರಿಯಾಜ್ ಅವರ ಕುತ್ತಿಗೆ ಸೀಳಿ ಪರಾರಿಯಾಗಿದ್ದಾನೆ. ಅಂತಹ ಸ್ಥಿತಿಯಲ್ಲೂ ರಿಕ್ಷಾ ಚಲಾಯಿಸಿಕೊಂಡು ಬಸ್ ನಿಲ್ದಾಣದಲ್ಲಿನ ರಿಕ್ಷಾ ಚಾಲಕರಿಗೆ ವಿಷಯ ತಿಳಿಸಿದ್ದಾರೆ. ಆಟೋ ಚಾಲಕರೆಲ್ಲ ಸಮೀಪದಲ್ಲಿದ್ದ ಮಾರ್ಕೆಟ್ ವಿಷಯ ತಿಳಿಸಿ ಅವರ ನೆರವಿನಿಂದ ಜಿಲ್ಲಾ ಆಸ್ಪತ್ರೆಗೆ ನಂತರ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉತ್ತರ ಶಾಸಕ ಆಸೀಫ್ ಸೇಠ್, ಕಾನೂನು-ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ  ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.
ಆರೋಪಿ ಬಂಧನ : ರಿಕ್ಷಾ ಚಾಲಕ ನೀಡಿದ ಮಾಹಿತಿ ಮತ್ತು ಕೇಂದ್ರ ಬಸ್ ನಿಲ್ದಾಣದ ಸುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳಿಂದ ಹಲ್ಲೆಗೈದ ಅರೋಪಿಯ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಅವನ ಹಿನ್ನಲೆಯ ಕುರಿತು ತನಿಖೆ ನಡೆದಿರುವುದರಿಂದ ಅವನ ಕುರಿತು ಸದ್ಯ ಮಾಹಿತಿ ನೀಡಲಾಗದು ಎಂದು ಡಿಸಿಪಿ ರೋಹನ್ ಜಗದೀಶ ತಿಳಿಸಿದ್ದಾರೆ.