ಬೆಳಗಾವಿ : ಕಳೆದ 10 ವರ್ಷಗಳಿಂದ ಎನ್ ಡಬ್ಲುಕೆಆರ್ ಟಿಸಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಆದರೆ ಈಗ ಶಕ್ತಿ ಯೋಜನೆ ಹಾಗೂ ವೆಚ್ಚ ಹೆಚ್ಚಳದಿಂದ ನಷ್ಟವನ್ನು ಸರಿದೂಗಿಸಲು ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಹಾಗೂ ಎನ್ ಡಬ್ಲುಕೆಆರ್ ಟಿಸಿ ಅಧ್ಯಕ್ಷ ರಾಜು ಕಾಗೆ ಅವರು ಬಸ್ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ್ದಾರೆ.
ಕಾಗವಾಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಪಂಚ ಗ್ಯಾರಂಟಿಯ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಆದ್ದರಿಂದ ಸಂಸ್ಥೆಯನ್ನು ಲಾಭದ ಹಾದಿಗೆ ತರುವ ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.