ಬೆಳಗಾವಿ: ಸ್ಟಾರ ಏರಲೈನ್ಸ ತಿರುಪತಿ – ಬೆಳಗಾವಿ ನಡುವೆ ದೀಢಿರನೇ ವಿಮಾನ ಹಾರಾಟ ರದ್ದುಪಡಿಸಿದ ಪರಿಣಾಮ ಪ್ರಯಾಣಿಕರ ತೀವ್ರ ತೊಂದರೆ ಅನುಭವಿಸಿದ ಘಟನೆ ಸೋಮವಾರ ನಡೆದಿದೆ.
ತಿರುಪತಿಯಿಂದ ಬೆಳಗಾವಿಗೆ ಮರಳಿ ಆಗಮಿಸಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು. ತಿರುಪತಿಯಿಂದ ಬೆಳಗಾವಿಗೆ ಆಗಮಿಸಬೇಕಿದ್ದ ಮಹಾಂತೇಶ ಎಂಬುವರ ಕುಟುಂಬದ ಸದಸ್ಯರೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಬೇಗನೆ ಮರಳಿ ಬರುತ್ತಿದ್ದರು ಆದರೆ ವಿಮಾನ ರದ್ದಾದ ಕಾರಣ ಬೆಳಗಾವಿಗೆ ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಣ್ಣೀರು ಹಾಕಿದರು.
ಸಂಜೆ 7.30ಕ್ಕೆ ಹಾರಾಟ ನಡೆಸಬೇಕಿದ್ದ ಸ್ಟಾರ್ ಏರ್ಲೈನ್ಸ ವಿಮಾನವನ್ನು ರದ್ದು ಮಾಡಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ರದ್ದು: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಜೈಪುರ ಮತ್ತು ತಿರುಪತಿ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಬೇಕಿದ್ದ ಸ್ಟಾರ್‌ಏರ್ ಕಂಪನಿಯ ವಿಮಾನಗಳ ಹಾರಾಟ ಸೋಮವಾರ ರದ್ದಾಯಿತು. ಇದರಿಂದಾಗಿ ಹಲವು ಪ್ರಯಾಣಿಕರು ಪರದಾಡಿದರು.
‘ಸ್ಟಾರ್‌ಏರ್ ಕಂಪನಿಯ ವಿಮಾನ ಇಲ್ಲಿಂದ ಜೈಪುರಕ್ಕೆ ತೆರಳಿ, ನಂತರ ಬೆಳಗಾವಿಗೆ ಮರಳಬೇಕಿತ್ತು. ಮತ್ತೊಂದು ವಿಮಾನ ತಿರುಪತಿಗೆ ಹೋಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಅವು ಕಾರ್ಯಾಚರಣೆ ನಡೆಸಲಿಲ್ಲ’ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ತ್ಯಾಗರಾಜನ್ ಅವರು ಪ್ತಿಕ್ರಿಯಿಸಿದ್ದಾರೆ.