ಬೆಳಗಾವಿ: ನಗರದ ಕೆ.ಎಲ್.ಇ. ಸಂಸ್ಥೆಯ ಅಂಗಸಂಸ್ಥೆಯಾದ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮವಾದ ಸಾಧನೆಗೈದಿದ್ದು,
2023-24 ರ ಪರೀಕ್ಷೆಯಲ್ಲಿ 100ಕ್ಕೆ ಶೇ. 99.33ರಷ್ಟು ಫಲಿತಾಂಶ ಹೊರಹೊಮ್ಮಿದೆ. ಪರೀಕ್ಷೆಗೆ ಹಾಜರಾಗಿದ್ದ ಕಾಲೇಜಿನ 598 ವಿದ್ಯಾರ್ಥಿಗಳ ಪೈಕಿ 269 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮಶ್ರೇಣಿ (ಡಿಸ್ಟಿಂಕ್ಷನ್), 304 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. (1) ಕುಮಾರ: ಪ್ರಫುಲ್ ಪಾಟೀಲ, ಕುಮಾರ ಪ್ರಣಯ ಪಾಟೀಲ -600 ಕ್ಕೆ 587 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮಸ್ಥಾನ (2)ಶ್ರೀ ಯಾದವ, ಶ್ರದ್ಧಾ ಕಿಲ್ಲೇಕರ ಮತ್ತು ಕಾರ್ತಿಕ ಪೂಜಾರಿ 600 ಕ್ಕೆ 584 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯಸ್ಥಾನ ಹಾಗೂ (3) ಕುಮಾರಿ: ಅರ್ಪಿತಾ ಮಳಲಿಕರ, ಸುಯೋಗ ಕಲಘಟಕರ, ಶಾಫ್ ಕಿತ್ತೂರ, ಸೊಹಂ ಕುಲಕರ್ಣಿ ಮತ್ತು ಪ್ರಗತಿ ಪಾಟೀಲ 600 ಕ್ಕೆ – 583 ಗುಣಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದು ಅತ್ಯುತ್ತಮವಾದ ಸಾಧನೆಯನ್ನು ಮಾಡಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗಣಿತಶಾಸ್ತ್ರದಲ್ಲಿ 14 ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ 11 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 09 ವಿದ್ಯಾರ್ಥಿಗಳು, ಗಣಕವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು, ಭೌತಶಾಸ್ತçದಲ್ಲಿ 02 ವಿದ್ಯಾರ್ಥಿಗಳು, ಕನ್ನಡ ವಿಷಯದಲ್ಲಿ 02 ವಿದ್ಯಾರ್ಥಿಗಳು ಒಟ್ಟಾರೆ 43 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಪ್ರಫುಲ್ ಪಾಟೀಲ, 600 ಕ್ಕೆ 587, ಪ್ರಣಯ ಪಾಟೀಲ -600 ಕ್ಕೆ 587, ಶ್ರೀ ಯಾದವ, 600 ಕ್ಕೆ 584, ಶ್ರದ್ಧಾ ಕಿಲ್ಲೇಕರ, 600 ಕ್ಕೆ 584, ಕಾರ್ತಿಕ ಪೂಜಾರಿ, 600 ಕ್ಕೆ 584, ಅರ್ಪಿತಾ ಮಳಲಿಕರ, 600 ಕ್ಕೆ – 583, ಸುಯೋಗ ಕಲಘಟಕರ, 600 ಕ್ಕೆ – 583, ಶಾಫ್ ಕಿತ್ತೂರ, 600 ಕ್ಕೆ – 583, ಸೊಹಂ ಕುಲಕರ್ಣಿ, 600 ಕ್ಕೆ – 583, ಪ್ರಗತಿ ಪಾಟೀಲ, 600 ಕ್ಕೆ – 583 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ವ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರು, ಕೆ.ಎಲ್.ಇ. ಸಂಸ್ಥೆಯ ಆಜೀವ ಸದಸ್ಯರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವ್ಹಿ.ಸಿ. ಕಾಮಗೋಳ ಅವರು, ಉಪ-ಪ್ರಾಚಾರ್ಯರಾದ ಡಾ.ಎಸ್.ಎ. ಜವಳಿ ಅವರು ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ದ್ವಿತೀಯ ಪಿಯುಸಿ: ಆರ್.ಎಲ್.ಎಸ್. ಪಿ.ಯು. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
