ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆಲುವಾದರೆ ಸ್ವಸಹಾಯ ಸಂಘಟನೆಗಳುಗೆ ಬಲಪಡಿಸಲಾಗುವುದು. ಮಹಿಳೆಯರಿಗೆ ಅಗತ್ಯ ಸೌಲಭ್ಯ ಸೇರಿದಂತೆ, ಸಹಾಯ-ಸಹಕಾರ ನೀಡಲಾಗುವುದು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ಚಿಕ್ಕೋಡಿ ಲೋಕಸಭೆ‌ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಕಲಖಾಂಬ, ಮುಚ್ಚಂಡಿ, ಅಷ್ಠೆ ಗ್ರಾಮದಲ್ಲಿ ಬೂತ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂದೆಯವರಾದ ಸಚಿವ ಸತೀಶ್ ಜಾರಕಿಹೊಳಿ ಅವರ ಕ್ಷೇತ್ರದವಾದರಿಂದ ಈ ಭಾಗದ ಜನತೆ ಮೇಲೆ ಅಪಾರ ನಂಬಿಕೆ, ಬಹಳಷ್ಟು ನೀರಿಕ್ಷೆ ಇಡಲಾಗಿದೆ. ಬಹುಮತ ಅಂತರದಿಂದ ಗೆಲ್ಲಲು ಮತದಾರರು ಕೈ ಹಿಡಿಯಬೇಕು. ಈ ಕ್ಷೇತ್ರದಿಂದ ಆಯ್ಕೆಯಾಗಿ ಲೋಕಸಭಾ ಪ್ರವೇಶ ಮಾಡಿದರೆ ಮಹಿಳಾ ಸಂಘಟನೆ ಸೇರಿದಂತೆ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಚ್ಚಂಡಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ, ನಿಮ್ಮ ಮನೆ ಮಗಳಾದ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆಯ್ಕೆ ಬಳಿಕ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಿಮ್ಮೆಲ್ಲರ ಆಶೀರ್ವಾದಿಂದ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಜನಸೇವೆ ಮೆಚ್ಚಿ ಮತದಾರರ ಅವರನ್ನು ಆಯ್ಕೆ ಮಾಡಿದ್ದಾರೆ, ಈ ಸಲ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಾಗಿದೆ. ಮತದಾರರು ಗೆಲುವಿಗೆ ಕೈ ಜೋಡಿಸಿದರೆ ಹಗಲಿರುಳು ನಿಮ್ಮೆ ಸೇವೆ ಮಾಡಲಾಗುವುದು ಎಂದು ಹೇಳಿದರು.
“ಕೈ” ಗೆ ಶಕ್ತಿ ತುಂಬಿ ಪ್ರಿಯಂಕಾ: ರೈತರು, ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸಲು ಕಾಂಗ್ರೆಸ್‌ ಅಧಿಕಾರಿಕ್ಕೆ ಬರಬೇಕಾಗಿದೆ. ಕೆಳ ವರ್ಗದ ಜನರು ಅಭಿವೃದ್ಧಿ ಹೊಂದಬೇಕಾಗಿದೆ. ಸಮಾಜ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದಲ್ಲಿ ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ, ಹೀಗಾಗಿ ಜನರ ಹಿತ ಕಾಯುವ ಕೈ ಗೆ ನೀವು ಶಕ್ತಿ ತುಂಬಬೇಕು ಎಂದು ಹೇಳಿದರು.
ಕಾಂಗ್ರೆಸ್‌ ಅಧಿಕಾರ ಉದ್ದಕ್ಕೂ ದೇಶದ ಜನರ ನೆಮ್ಮದಿ ಬಯಸಿದೆ. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ, ಕೃಷಿ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದೆ. ಮತ್ತೆ ದೇಶವನ್ನು ಕಟ್ಟಬೇಕಾಗಿದೆ ಹೀಗಾಗಿ ನವಯುವಕರು ರಾಜಕೀಯಕ್ಕೆ ಬರಬೇಕು. ದೇಶದ ಭವಿಷ್ಯ ಯುವಕರ ಕೈಯಲ್ಲಿ ಇದೆ, ಹೀಗಾಗಿ ಬಹುಮತ ಅಂತರದಿಂದ ಮತದಾರರು ಗೆಲ್ಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್‌ ಮುಖಂಡ ಅರವಿಂದ ಕುರ್ಚಿ ಮಾತನಾಡಿ, ದೇಶ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜನತೆ ಬಯಸಿದ್ದಾರೆ. ಬಿಜೆಪಿಯಿಂದ “ನೈಯಾ ಪೈಸೆ” ಅಭಿವೃದ್ಧಿ ಕಾರ್ಯ ಅಸಾಧ್ಯ, ಬರೀ ಮೊದಿ ಅಲೆ ಇದೆ ಎಂದು ಹೇಳಿ ಚುನಾವಣೆ ಸ್ಪರ್ದಿಸುವವರಿಗೆ ಮತದಾರರು ಪಾಠ ಕಲಿಸಬೇಕು. ಕಾಂಗ್ರೆಸ್‌ ಗೆ ನಿಮ್ಮ ಅಮೂಲ್ಯವಾದ ಮತ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್‌ 70 ವರ್ಷದ ಅಧಿಕಾರ ಅವಧಿಯಲ್ಲಿ ಕೇವಲ 50 % ಶೇಕಡಾ ಸಾಲ ಮಾಡಲಾಗಿತ್ತು, ಬಿಜೆಪಿ ಅಧಿಕಾರ ಅವಧಿ 10 ವರ್ಷದಲ್ಲಿ ಮೂರು ಪಟ್ಟು ಸಾಲ ದೇಶದ ಮೇಲೆ ಹೊರೆಸಿದೆ. ಎಲ್ಲವೂ ಸುಳ್ಳು, ಬಿಜೆಪಿಗರು ಜನತೆಯನ್ನು ಮರಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಭಾಗದ ಮನೆ-ಮಗಳಾಗಿರುವ ನಿಮ್ಮ ಪ್ರಿಯಂಕಾ ಜಾರಕಿಹೊಳಿ ಅವರನ್ನು ಚುನಾವಣೆಯಲ್ಲಿ ಬಹುಮತ ಅಂತರದಿಂದ ಗೆಲ್ಲಿಸಬೇಕಾಗಿದೆ. ಚಿಕ್ಕೋಡಿ ಬೆಳಗಾವಿಗೆ ಹತ್ತಿರವಾದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರವಿಂದ್ ಕಾರ್ಚಿ, ಜಯಶ್ರೀ ಮಾಳಗಿ, ಮನೋಹರ ಹುಕ್ಕೇರಿಕರ್, ಶಿವಾಜಿ ಪಾಟೀಲ್, ಕಮಲಪ್ಪಾ ಅಷ್ಟಗಿ, ಬಸವಣ್ಣಿ ನಾಯ್ಕ, ಪಿಂಟು ನಾಯಕ, ಸಂತೋಷ ನಾಯಕ, ಮಂಜುನಾಥ ಕೋಲಕಾರ,‌ ದುದಪ್ಪಾ ಅಸೋರೇಕರ್, ಯಲ್ಲಪ್ಪಾ ಮಾಸೇಕರ್ ಹಾಗೂ ಇತರರು ಇದ್ದರು.