ಬೆಳಗಾವಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿರುವುದನ್ನು ವಿರೋಧಿಸಿ ಬೆಳಗಾವಿಯ ಬಿಜೆಪಿ ಆಕಾಂಕ್ಷಿತರು ಅಸಮಾಧಾನಗೊಂಡಿದ್ದವರನ್ನು ಒಂದುಗೂಡಿಸಿ ಪ್ರಚಾರಕ್ಕೀಳಿಸುವ ಕಾರ್ಯವನ್ನು ಮಾಡುವಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದಾರೆ.
ನಿನ್ನೆ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮಾಡಿದ್ದ ರಾಜಿ-ಸಂಧಾನ ಕೊನೆಗೂ ಫಲ ನೀಡಿದೆ.
ಮಂಗಳವಾರ ತಡರಾತ್ರಿ ಅವರು ಬಿಜೆಪಿ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಜಗದೀಶ ಶೆಟ್ಟರ ಮತ್ತು ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಅತ್ಯಧಿಕ ಮತದಿಂದ ಆರಿಸಿ ಕಳಿಸಬೇಕು ಎಂದು ಖಡಕ ಸಂದೇಶ ನೀಡಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಸೇರಿದಂತೆ ಬೆಳಗಾವಿಯ ಘಟಾನುಘಟಿ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದು ಯಡಿಯೂರಪ್ಪ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ.
ಒಟ್ಟಾರೆ ಗಮನಿಸಿದರೆ ಸದ್ಯಕ್ಕೆ ಬೆಳಗಾವಿಯ ಬಂಡಾಯ ತಣ್ಣಗಾದಂತೆ ಕಾಣಿಸುತ್ತಿದೆ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತೀರ್ಮಾನಕ್ಕೆ ಬಂದಿರುವ ನಾಯಕರು ಯಾವುದೇ ಭಿನ್ನಮತ ಹಾಗೂ ಒಡಕು ತೋರ್ಪಡಿಸದೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಪಡಿಸಲು ಪಠಿಸಲು ಮುಂದಾಗಿರುವುದು ಈಗ ಗಮನ ಸೆಳೆದಿದೆ. ಕೊನೆಗೂ ಯಡಿಯೂರಪ್ಪ ಅವರ ಭೇಟಿ ಬೆಳಗಾವಿ ಭೇಟಿ ಫಲಪ್ರದವಾಗಿದೆ.