ಬೆಳಗಾವಿ : ಇಂಚಲ ಗ್ರಾಮದ ಬಳಿ ಸಂಭವಿಸಿದ ಎರಡು ಕಾರುಗಳ ಮದ್ಯೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಬೈಲಹೊಂಗಲ ಲದ್ದಿಗಟ್ಟಿಯ ಮಂಗಲಾ ಮಹಾಂತೇಶ ಬರಮ ನಾಯ್ಕರ- 50, ಚಾಲಕ ಸಂಪಗಾವಿ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ- 40 ಮೃತರಾದರೆ,
ರಾಯನಾಯಕ ಭರಮ ನಾಯ್ಕರ-87, ಗಂಗವ್ವ ರಾಯ ನಾಯಕ ಭರಮ ನಾಯ್ಕರ-80, ಮಂಜುಳಾ ಶ್ರೀಶೈಲ ನಾಗನಗೌಡರ-30, ಇಂಚಲ ಗ್ರಾಮದ ಚಾಲಕ ಸುಭಾನಿ ಲಾಲ್ ಸಾಬ್ ವಕ್ಕುಂದ-28 ಗಂಭೀರ ಗಾಯಗೊಂಡಿದ್ದು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಲಹೊಂಗಲದ ಭರಮ ನಾಯ್ಕರ ಕುಟುಂಬದವರು ಜನವರಿ 18ರಂದು ನಡೆಯುವ ಮನೆಯ ವಾಸ್ತು ಶಾಂತಿ ಸಲುವಾಗಿ ಕೊಣ್ಣೂರಿಗೆ ಬಟ್ಟೆ ಖರೀದಿಗೆ ತೆರಳಿದ್ದರು. ಬಟ್ಟೆ ಖರೀದಿಸಿ ಮರಳಿ ಬರುತ್ತಿರುವಾಗ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ.