ಬೆಳಗಾವಿ : ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣವಾಗಿ ಎರಡು ವರ್ಷಗಳಾದರೂ ಇನ್ನೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೆಂದೇ
ಕರೆಯಲಾಗುತ್ತಿದೆ. ಸಾರಿಗೆ ಸಂಸ್ಥೆಗೆ ಕಿತ್ತೂರು
ಕರ್ನಾಟಕ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕೆಂದು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ರಾಜ್ಯ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಅವರನ್ನು ಆಗ್ರಹಿಸಿದೆ.
ಸುವರ್ಣ ವಿಧಾನ ಸೌಧದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ
ಅಶೋಕ ಚಂದರಗಿ ನೇತೃತ್ವದ ನಿಯೋಗ, 2019 ರ ಸಪ್ಟೆಂಬರ್ 7 ರಂದು ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಎಂದು ಮರುನಾಮಕರಣ ಮಾಡಿದ
ಕೂಡಲೇ ಅಲ್ಲಿಯ ಸಾರಿಗೆ ಸಂಸ್ಥೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯೆಂದು
ಮರುನಾಮಕರಣ ಮಾಡಲಾಯಿತೆಂದು
ಸಚಿವರ ಗಮನಕ್ಕೆ ತಂದರಲ್ಲದೇ
2021 ರ ಅಕ್ಟೋಬರ 23 ರಂದು ಮುಂಬಯಿ ಕರ್ನಾಟಕಕ್ಕೆ ಕಿತ್ತೂರು
ಕರ್ನಾಟಕ ಎಂದು ಮರುನಾಮಕರಣ
ಮಾಡಿದ್ದರೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರನ್ನೇ
ಮುಂದುವರಿಸಲಾಗಿದೆ ಎಂದರು.
ಶೀಘ್ರವೇ ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲು ಕ್ರಮ ಕೈಕೊಳ್ಳಲಾಗುವದೆಂದು ಸಾರಿಗೆ ಸಚಿವರು ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ರಮೇಶ ಸೊಂಟಕ್ಕಿ,ಮೈನುದ್ದೀನ್.ಮಕಾನದಾರ,ಶಂಕರ ಬಾಗೇವಾಡಿ, ವಿರೇಂದ್ರ ಗೋಬರಿ ಮುಂತಾದವರು ಇದ್ದರು.
ಕಿತ್ತೂರು ಕರ್ನಾಟಕ ಮರುನಾಮಕರಣ
