ಬೆಳಗಾವಿ: ‘ಗಡಿಭಾಗದಲ್ಲಿರುವ ಬೆಳಗಾವಿ ಹಾಗೂ ಈ ಭಾಗದ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ಧವಿದ್ದು, ಅದಕ್ಕಾಗಿಯೇ ಎರಡನೇ ರಾಜಧಾನಿ’ ಎಂದು ಪರಿಗಣಿಸಿ, ಸುವರ್ಣ ವಿಧಾನಸೌಧ ಕಟ್ಟಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದಿಲ್ಲಿಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕದಲ್ಲಿರುವ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರವು ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಿದೆ. ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಸಮೀಪದ ಚಂದಗಡದಲ್ಲಿ ಸರ್ಕಾರಿ ಕಚೇರಿ ಕೂಡ ತೆರೆಯಲು ಮುಂದಾಗಿದ್ದು ಗಮನಕ್ಕೆ ಬಂದಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವೆ’ ಎಂದರು.

‘ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಯೋಜನೆ ರೂಪಿಸುತ್ತಿದ್ದೇವೆ. ಒಂದು ದಿನ ಮಳೆಯಾಗದಿದ್ದರೆ ಸರ್ಕಾರಕ್ಕೆ ಸಾವಿರ ಕೋಟಿ ರೂ.ಗಷ್ಟು ನಷ್ಟವಾಗುತ್ತದೆ. ರಾಜ್ಯದಲ್ಲಿ ಈ ಬಾರಿ ಮಳೆ ಬಹಳ ಕಡಿಮೆಯಾಗಿದೆ. ಕೆರೆಗಳಿಗೆ ನೀರು ತುಂಬಿಸಲು ಸಾಕಷ್ಟು ವಿದ್ಯುತ ತಗಲುತ್ತಿದೆ. ಆದರೂ ₹6ರಿಂದ ₹7ರ ದರದಲ್ಲಿ ಪ್ರತಿ ಯೂನಿಟ್‌ ವಿದ್ಯುತ್ ಖರೀದಿಸಿ, ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. ಉಳಿದ ಹಣವನ್ನು ಸರ್ಕಾರ ತುಂಬಲಿದೆ ಎಂದ ಅವರು, ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಟೆಂಡರ್‌ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಜನರಿಗಿದೆ. ಆದರೆ, ಉತ್ತಮ ಆಡಳಿತ ನೀಡಲು ಮೊದಲ ಆದ್ಯತೆ ಇದೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲಿ ಎಂದು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ನೀಡಿದ ಹೇಳಿಕೆ ಕುರಿತು, ‘ಪಕ್ಷದವರು ಯಾವಾಗ, ತೀರ್ಮಾನಿಸುತ್ತಾರೋ ತೀರ್ಮಾನಿಸಲಿ. ಅದರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.