ಡಾ. ಬಿಧನ್ ಚಂದ್ರ ರಾಯ್ (೧ ಜುಲೈ ೧೮೮೨ ರಿಂದ ಜುಲೈ ೧, ೧೯೬೨) ಅವರ ಜನ್ಮದಿನವಾದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಲೇಖನ.
ಡಾ. ರಾಯ್ ಒರ್ವ ವಿನಮ್ರ ವೈದ್ಯ, ಶಿಕ್ಷಣತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಹಾಗೂ ರಾಜಕಾರಣಿ. ಸುಮಾರು ೧೪ ವರ್ಷಗಳ ಕಾಲ (೧೯೪೮ ರಿಂದ ೧೯೬೨) ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರು, ಅತ್ಯುನ್ನತ ನಾಗರಿಕ ಪ್ರಶಸ್ತಿ “ಭಾರತ ರತ್ನ”ಕ್ಕೆ ಭಾಜನರಾದವರು. ತಮ್ಮ ಜೀವನವನ್ನೇ ಜನಸಮುದಾಯದ ಸೇವೆಗೆ ಅರ್ಪಿಸಿದ್ದರು. ಸಾವಿರಾರು ಜನರಿಗೆ ಚಿಕಿತ್ಸೆ ನೀಡಿ, ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾದವರು.
ಒಬ್ಬರೇ ಜೀವಿಸುವದಕ್ಕಿಂತ ಇನ್ನೊಬ್ಬರಿಗಾಗಿ ಬದುಕಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಇನ್ನೊಬ್ಬರಿಗಾಗಿ ಬದುಕುವದನ್ನು ಕರಗತ ಮಾಡಿಕೊಳ್ಳಬೇಕು. ಅದರಂತೆ ಜೀವನ ಸೆವೆಸುವವರು ಕೂಡ ಇದ್ದಾರೆ. ಎಲ್ಲ ವೈದ್ಯರಂತೆ ಕೇವಲ ಆಸ್ಪತ್ರೆ, ರೋಗಿ, ಚಿಕಿತ್ಸೆ, ಗಡಿಬಿಡಿ ಜೀವನದ ಹೊರತಾಗಿಯೂ ಅನಾಥ ಮಕ್ಕಳ ತಾಯಿಯಾಗಿ ದೇವರಾಗಿ ಸೇವೆ ಸಲ್ಲಿಸುತ್ತ, ವೈದ್ಯ ರೂಪದ ನಿಜವಾದ ದೇವರಾಗಿ ಸೇವೆಯಲ್ಲಿ ನಿರತರಾಗಿದ್ದಾರೆ ಡಾ. ಮನಿಷಾ ಭಾಂಡನಕರ. ತಂದೆ-ತಾಯಿ/ಪೋಷಕರಿಲ್ಲದ ಅನಾಥ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುವ ಕರುಣಾಮಯಿ ತಾಯಿ. ಅರ್ಪಣಾ ಮನೋಭಾವ ಹೊಂದಿರುವ ತಂಡದೊAದಿಗೆ ಸೇವೆ ಸಲ್ಲಿಸುವ ಡಾ. ಮನೀಷಾ ಭಾಂಡನಕರ ಅವರ ವೈದ್ಯಕೀಯ ಸೇವೆ ಮತ್ತು ಕಾಳಜಿ, ಸಮರ್ಪಣೆ, ನಿಸ್ವಾರ್ಥತೆ ಮತ್ತು ಮಕ್ಕಳ ಜೀವನವನ್ನು ಬದಲಾಯಿಸುವ ಬದ್ಧತೆ ಅತ್ಯಂತ ಶ್ಲಾಘನೀಯವಾದ್ದು.
ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಜವಾದ್ಬಾರಿ ಹೊತ್ತುಕೊಂಡಿರುವ ಡಾ. ಮನೀಷಾ ಅವರು ಮತ್ತು ಅವರ ಬದ್ಧತೆಯ ತಂಡವು ಗುಣಮಟ್ಟದ ಶಿಕ್ಷಣ, ಅಗತ್ಯವಿರುವ ವೈದ್ಯಕೀಯ ಸೇವೆ ಮತ್ತು ಆರೈಕೆ, ಗುಣಮಟ್ಟದ ಆಹಾರ, ಬಟ್ಟೆ ಮತ್ತು ಮಕ್ಕಳಿಗೆ ಮಾನಸಿಕ-ಸಾಮಾಜಿಕ ಧರ್ಯವನ್ನು ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.ಅವರ ಕರ್ಯವನ್ನು “ನೋಡುವುದು ನಂಬುವುದು” ಮಕ್ಕಳಿಗಾಗಿ ಮಾಡುವ ಒಳ್ಳೆಯ ಕರ್ಯಗಳನ್ನು ನೋಡಬೇಕು. ನಮ್ಮ ಪ್ರಯತ್ನಗಳು ಆತ್ಮವಿಶ್ವಾಸವನ್ನು ತಂದಿದೆ, ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸಿದೆ, ಇದು ಅನಾಥ ಮಕ್ಕಳು ಅಭಿವೃದ್ಧಿ ಹೊಂದುತ್ತಿರುವ ವಯಸ್ಕರನ್ನಾಗಿ ಮಾಡುವದಲ್ಲದೇ ಭವಿಷ್ಯದಲ್ಲಿ ಅವರ ಸುತ್ತಲಿನ ಪ್ರಪಂಚವನ್ನು ಬದಲಾಯಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಡಾ (ಶ್ರೀಮತಿ) ಮನೀಷಾ ಭಾಂಡನಕರ್ ಯಾರು?
ಡಾ. ಮನೀಶಾ ಭಾಂಡನಕರ ಅವರು ಚಿಕ್ಕಮಕ್ಕಳ ತಜ್ಞವೈದ್ಯರಾಗಿದ್ದು, ನವಜಾತ ಶಿಶುಗಳ ಆರೈಕೆಯಲ್ಲಿ ವಿಶೇಷವಾಗಿ ತರಬೇತಿ ಪಡೆದಿದ್ದು, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭೋಧಕರಾಗಿ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹಿರಿಯ ನವಜಾತ ಶಿಶುಗಳ ತಜ್ಞವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗೋವಾದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪೂರೈಸಿದ್ದು, ಕಾಹೆರನಿಂದ ಪಿಹೆಚ್ಡಿ ಹಾಗೂ ಎಂಆರ್ಸಿಪಿ ಮುಡಿಗೇರಿಸಿಕೊಂಡಿದ್ದಾರೆ. ೨೦೧೧ರಲ್ಲಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ”ದ ಸಂಪರ್ಕಕ್ಕೆ ಬಂದ ಅವರು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿಕೊಂಡಿದ್ದು, ಅನಾಥರಿಗೆ ಆಶ್ರಯ ನೀಡುವ, ಅವರ ಸರ್ವಾಂಗೀಣ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತ ಅನಾಥ ಮಕ್ಕಳ ಸಲಹುವ ದೇವತೆಯಾಗಿ ಮಾರ್ಪಟಿದ್ದಾರೆ.
ನಿಮ್ಮ ಕೇಂದ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ.
ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ್ ಅನ್ನು ೧೯೮೨ ರಲ್ಲಿ ಪೊಲೀಸ ಹೆಡ್ ಕ್ವಾರ್ಸ ಹಿಂಬಾಗದಲ್ಲಿ ಸ್ಥಾಪಿಸಲಾಯಿತು. ಅತಿದೊಡ್ಡ ಅನಾಥಾಶ್ರಮಗಳಲ್ಲಿ ಒಂದಾಗಿದ್ದು, ಸದ್ಯಕ್ಕೆ ೬೫ ಮಕ್ಕಳು ಇಲ್ಲಿದ್ದಾರೆ. ಅನಾಥರು, ಪರಿತ್ಯಕ್ತ ಮತ್ತು ಶರಣಾದ ಮಕ್ಕಳ ಸೇವೆಯಲ್ಲಿ ನಮ್ಮ ತಂಡವು ತೊಡಗಿಕೊಂಡಿದೆ. ನಮ್ಮಲ್ಲಿ ಹುಡುಗ ಮತ್ತು ಹುಡಗಿಯರಿಗೆ ಎಲ್ಲ ಸೌಲಭ್ಯಗಳನ್ನೊಳಗೊಂಡ ಪ್ರತ್ಯೇಕ ವಸತಿಗಳಿವೆ. ವಾಸ್ತವ್ಯ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು, ಆಹಾರ, ಬಟ್ಟೆ, ಪುಸ್ತಕ ಸೇರಿದಂತೆ ಅನೇಕ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ವೈದ್ಯಾಧಿಕಾರಿಗಳು, ಸಮಾಜ ಸೇವಕರು, ಸಲಹೆಗಾರರು, ಶಿಕ್ಷಕರು, ತಜ್ಞರು, ನರ್ಸ್, ಅಡುಗೆಯವರು, ಭದ್ರತೆ ಮತ್ತು ಆಯಾಗಳು ಸೇರಿದಂತೆ ಸುಮಾರು ೨೫ಕ್ಕೂ ಅಧಿಕ ಸಿಬ್ಬಂದಿಗಳು ಮಕ್ಕಳ ಆರೈಕೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ದತ್ತು ಸ್ವೀಕಾರದ ಸನ್ನಿವೇಶ ಏನು:
ಸುಮಾರು ೩೦,೦೦೦+ ಸಂಭಾವ್ಯ ಪೋಷಕರು ನೋಂದಾಯಿಸಿಕೊAಡಿದ್ದಾರೆ ಮತ್ತು ಭಾರತದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾಯುತ್ತಿದ್ದಾರೆ. ಆದರೆ ದೇಶದಲ್ಲಿ ಕೇವಲ ೩೦೦೦+ ಕಾನೂನು ದತ್ತುಗಳು ಮಾತ್ರ ಸಂಭವಿಸುತ್ತವೆ. ಬೆಳಗಾವಿ ಜಿಲ್ಲೆಯಲ್ಲಿಯೂ ೧೦೦ಕ್ಕೂ ಹೆಚ್ಚು ಪೋಷಕರು ಮಕ್ಕಳನ್ನು ದತ್ತು ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.
ನಿಮ್ಮ ಕೇಂದ್ರದಿಂದ ಎಷ್ಟು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ:
ನಮ್ಮದು ಬೆಂಗಳೂರು ಹೊರತುಪಡಿಸಿ ದೊಡ್ಡ ದತ್ತು ಕೇಂದ್ರವಾಗಿದೆ ಮತ್ತು ಇದು ಸ್ಥಾಪನೆಯಾದಾಗಿನಿಂದ ೧೩೦ ಮಕ್ಕಳನ್ನು ಕಾನೂನುಬದ್ಧವಾಗಿ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ದತ್ತು ತೆಗೆದುಕೊಳ್ಳಲಾಗಿದೆ. ದತ್ತು ಪಡೆಯುವ ಪ್ರಕ್ರಿಯೆಯು ದೀರ್ಘಾವಧಿಯದ್ದಾಗಿದೆ, ಕಾನೂನು ದಾಖಲಾತಿ ಪ್ರಕ್ರಿಯೆಯ ನಂತರ ಸರ್ಕಾರದ ಮೇಲ್ವಿಚಾರಣೆಯ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಸರಿಯಾದ ಪರಿಶೀಲನೆ, ಕುಟುಂಬದ ಮತ್ತು ನಿರೀಕ್ಷಿತ ಪೋಷಕರ ಸಮಾಲೋಚನೆ ಮತ್ತು ಸಮಿತಿಯ ಅನುಮೋದನೆಯ ಮೇರೆಗೆ ಮಗುವನ್ನು ಮಾತ್ರ ದತ್ತು ತೆಗೆದುಕೊಳ್ಳಬಹುದು.
ಅಂತರರಾಷ್ಟ್ರೀಯ ದತ್ತುಗಳ ಬಗ್ಗೆ ಹೇಗೆ:
ಅಂತರಾಷ್ಟ್ರೀಯ ದತ್ತುಗಳು ಕಠಿಣ ಮತ್ತು ಪ್ರಯಾಸಕರ ಕಾರ್ಯವಿಧಾನ. ಇವುಗಳನ್ನು ಕೇಂದ್ರ ಅಡಾಪ್ಷನ್ ರಿಸೋರ್ಸ್ ಅಥಾರಿಟಿ ಸಮನ್ವಯಗೊಳಿಸಿ, ನಿಯಂತ್ರಿಸಿ ಮೇಲ್ವಿಚಾರಣೆ ಮಾಡಲಾಗುತ್ತದೆ. ನಮ್ಮ ಕೇಂದ್ರದಿAದ ೧೩ ಮಕ್ಕಳನ್ನು ವಿದೇಶದ ದಂಪತಿಗಳಿಗೆ ದತ್ತು ನೀಡಲಾಗಿದೆ. ಸಾಮಾನ್ಯವಾಗಿ, ಭಾರತೀಯ ದಂಪತಿಗಳು ಪೋಷಕರು ಆರೋಗ್ಯವಂತ ಶಿಶುಗಳನ್ನು ಬಯಸುತ್ತಾರೆ. ಆದರೆ ವಿದೇಶಿ ದಂಪತಿಗಳು ವಿಶೇಷ ಮಕ್ಕಳನ್ನು ಅದರಲ್ಲಿಯೂ ಬೆಳವಣಿಗೆಯ ವಿಳಂಬ, ಭಾಗಶಃ ಕುರುಡು, ಮಾತಿನ ಕೊರತೆ, ಕಲಿಕೆಯಲ್ಲಿ ಅಸಮರ್ಥತೆ ಇತ್ಯಾದಿ ವಿಶೇಷ ನ್ಯೂನ್ಯತೆಯನ್ನು ಹೊಂದಿರುವ ಮಕ್ಕಳನ್ನೂ ಸಹ ದತ್ತು ಪಡೆದಿದ್ದಾರೆ.
ಸಮುದಾಯಕ್ಕೆ ನಿಮ್ಮ ಸಲಹೆ ಏನು:
ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಹೊಂದಲು ಕಾನೂನು ಪ್ರಕಾರವಾಗಿ ದತ್ತು ಪಡೆಯುವ ಅವಕಾಶವನ್ನು ಕಲ್ಪಿಸಿದ್ದು, ಇದು ಅತ್ಯುತ್ತಮ ಮಾರ್ಗ. ಅಲ್ಲದೇ ಅಪಾರ ತೃಪ್ತಿಯನ್ನು ಉಂಟುಮಾಡುತ್ತದೆ. ದತ್ತು ಪಡೆದವರೆಲ್ಲರೂ ತಮ್ಮ ಸಂತೋಷ, ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದು, ಅವರ ಕುಟುಂಬಗಳಲ್ಲಿ ಸಂತೋಷದಿAದ ಜೀವಿಸುತ್ತಿದ್ದಾರೆ. ದತ್ತು ಪಡೆದ ಮಗುವಿನಿಂದ ಅವರ ಕುಟುಂಬದ ಜೀವನವನ್ನೇ ಬದಲಾಯಿಸಿದೆ.
ಮಕ್ಕಳ ಚಟುವಟಿಕೆಗಳನ್ನು ಹೇಗೆ ಯೋಜಿಸಲಾಗಿದೆ:
ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿ ಪ್ರತಿ ಮಗುವಿಗೆ ಸಹಾನುಭೂತಿ, ಕಾಳಜಿ, ಹಂಚಿಕೆ ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಸೇವೆ ಸಲ್ಲಿಸುವ ಸರಳ ಮೂಲ ಮೌಲ್ಯಕ್ಕೆ ಬದ್ಧರಾಗಿದ್ದಾರೆ. ನಾವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನಾ ಅವಧಿಯನ್ನು ಹೊಂದಿದ್ದೇವೆ. ಅವರ ಬೆಳಗಿನ ಕರೆಗಳ ನಂತರ, ಅವರಿಗೆ ಪೌಷ್ಟಿಕ ಉಪಹಾರವನ್ನು ನೀಡಲಾಗುತ್ತದೆ. ಇತರ ಮಕ್ಕಳಿಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಎಲ್ಲ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲಾಗುತ್ತದೆ.
ಭವಿಷ್ಯದ ಯೋಜನೆಗಳು:
ಶೀಘ್ರದಲ್ಲೇ ನಾವು ವೃತ್ತಿಪರ ಗಮನ ಅಗತ್ಯವಿರುವ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪೂರೈಸಲು “ಪ್ರಾರಂಭ” ಎಂಬ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಇದು ವಾಕ್ ರೋಗಶಾಸ್ತ್ರ, ಬುದ್ಧಿಮಾಂದ್ಯತೆ, ಬೆಳವಣಿಗೆಯಲ್ಲಿ ವಿಳಂಬ,, ಕಲಿಕೆಯ ಅಸಾಮರ್ಥ್ಯ, ಭೌತಚಿಕಿತ್ಸೆ ಸೇರಿದಂತೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪೋಷಕರು ಮತ್ತು ಮಕ್ಕಳ ಕಷ್ಟಗಳನ್ನು ನಿವಾರಿಸಲು ವಿಶೇಷ ವಿನ್ಯಾಸದ ಸ್ಥಳವನ್ನು ವಿನ್ಯಾಸಗೊಳಿಸಿದ್ದೇವೆ. ಅಗತ್ಯವಿರುವ ಮಕ್ಕಳಿಗೆ ವಿಶೇಷ ಸೇವೆಗಳನ್ನು ನೀಡುತ್ತಿರುವ ಕೆಎಲ್ಇ ಫಿಸಿಯೋಥೆರಪಿ ಕಾಲೇಜಿಗೆ ನಾವು ಕೃತಜ್ಞರಾಗಿರುತ್ತೇವೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ನಮ್ಮ ಸಹಯೋಗದ ಪ್ರಯತ್ನಗಳು ಕೆಲವು ರೀತಿಯ ಅಂಗವೈಕಲ್ಯ ಹೊಂದಿರುವ 100 ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿವೆ ಮತ್ತು ಅವರಿಗೆ ಕ್ಯಾಂಪಸ್ನಲ್ಲಿ ಚಿಕಿತ್ಸೆ ನೀಡಲು ನಾವು ಸಿದ್ಧರಿದ್ದೇವೆ. “ಪ್ರಾರಂಭ”ದಿಂದ ಮೂಲಸೌಕರ್ಯವು ಶೀಘ್ರದಲ್ಲೇ ಅಗತ್ಯವಿರುವ ಮಕ್ಕಳ ಸೇವೆಗಳಲ್ಲಿರಲಿದೆ.
ಡಾ. ಮನೀಶಾ ಅವರು ಅತ್ಯಂತ ಸಂಕೀರ್ಣವಾದ ನವಜಾತ ಶಿಶುಗಳನ್ನು ಅಗಾಧ ಕಾಳಜಿ ಮತ್ತು ಸಮರ್ಪಣೆಯೊಂದಿಗೆ ನಿರ್ವಹಿಸುತ್ತಿದ್ದು, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸಲು ತಮ್ಮ ಸಕಲ ಪ್ರಯತ್ನವನ್ನು ಧಾರೆ ಎರೆಯುತ್ತಿದ್ದಾರೆ. ಮಕ್ಕಳ ನಡುವೆ ಇರುವ ಅವರು ಮಕ್ಕಳಿಗೆ ಬೆಳಕಾಗಿ ಮಾದರಿಯಾಗಿದ್ದು, ಸಂತೋಷ ಮತ್ತು ಆತ್ಮವಿಶ್ವಾಸವನ್ನು ಪ್ರತಿರೂಪವಾಗಿದ್ದಾರೆ. ವೈದ್ಯರ ದಿನಾಚರಣೆ ನಿಮಿತ್ತ ಯಂಗಕರ್ನಾಟಕದೊಂದಿಗೆ ತಮ್ಮ ಸೇವಾ ಚಟುವಟಿಕೆಗಳನ್ನು ಹಂಚಿಕೊಂಡರು.
ಅನಾಥ ಮಕ್ಕಳನ್ನು ಪೋಷಿಸುತ್ತ ಅವರಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡುತ್ತಿರುವ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ (ಚಿಕ್ಕುಂಬಿಮಠ ಆಶ್ರಮ)ಕ್ಕೆ ತಾವು ದಾನ ನೀಡಿ ಮಕ್ಕಳ ಅಭಿವೃದ್ದಿಗೆ ಸಹಕರಿಸುವವರು ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, A/c No.370301010041675 IFSC: UBIN0537039. ಶಾಖೆ – ಮಾರ್ಕೆಟ್ ಯಾರ್ಡ್, ಬೆಳಗಾವಿ, ದೇಣಿಗೆ ನೀಡಬಹುದು. ಹೆಚ್ಚಿ ಮಾಹಿತಿಗಾಗಿ ದೂ. -0831-2473919 (M) 9606869122 / 6360719554 ಇಲ್ಲಿಗೆ ಸಂಪರ್ಕಿಸಿ.