ಬೆಳಗಾವಿ,: ನಗರದ ಕಸ ಸಂಗ್ರಹ ಮಾಡಲು ಹಳೆ ಟೆಂಡರ್ ನಲ್ಲಿ ಸಾಕಷ್ಟು ನೂನ್ಯತೆಗಳಿದ್ದವು. ನೌಕರರ ಸಂಖ್ಯೆ ಕಡಿಮೆ ಇತ್ತು. ಈಗ ಹೊಸ ಟೆಂಡರ್ ಮಾಡಿದ್ದೇವೆ. ಇದರಲ್ಲಿ 36 ಟಿಪ್ಪರ್ ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತೆ ಶುಭ ಬಿ. ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವಾಹನದ ಸಾಮಥ್ರ್ಯ 4.5 ಟನ್ ಇದೆ. ಇದರಲ್ಲಿ 12 ಹೊಸ ಕಾಂಪ್ಯಾಕ್ಟ್ ಬರುತ್ತವೆ. ಹಿಂದೆ ಇದ್ದ ವಾಹನಗಳು ಕಸ ಸಂಗ್ರಹ ಮಾಡುವಾಗ ರಸ್ತೆಯ ಮಧ್ಯದಲ್ಲಿ ನಿಂತಿರುವ ಸಾಕಷ್ಟು ಉದಾರಣೆಗಳಿವೆ.
287 ರಿಂದ 290 ಜನ ನೌಕರರು ಹೊಸ ಟೆಂಡರ್ ನಲ್ಲಿ ಬರುತ್ತಾರೆ. ಇದರಲ್ಲಿ ಕಸ ಸಂಗ್ರಹ ಮಾಡುವವರು, ಸಹಾಯಕರು, ವಾಹನ ಚಾಲಕರು ಭರ್ತಿ ಮಾಡಿಕೊಳ್ಳಲಾಗಿದೆ ಎಂದರು.
ಪದವೀಧರರು ಹಾಗೂ ಪಿಯುಸಿ ಅನುತ್ತಿರ್ಣರಾದವರು ಕಸ ಸಂಗ್ರಹ ಮಾಡುವ ಕೆಲಸಕ್ಕೆ ಅರ್ಜಿ ಹಾಕಿದ್ದರು. ಪಿಯುಸಿ ಅನುತ್ತಿರ್ಣರಾದವರಿಗೆ ಪಾಲಿಕೆಯಿಂದ ಮರು ಪರೀಕ್ಷೆ ಬರೆಯಲು ಸಹಾಯ ಮಾಡಲಾಗವುದು. ಹಾಗೂ ಪದವೀಧರರಿಗೆ ಈ ಕೆಲಸಕ್ಕೆ ಅವಕಾಶ ಇಲ್ಲ. ಅವರಿಗೆ ಸ್ಪೂರ್ತಿ ನೀಡಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕರು ಕಸ ಸಂಗ್ರಹ ಮಾಡಲು, ಚರಂಡಿ ಶುಚಿಗೊಳಿಸಲು ಬರುವುದಿಲ್ಲ ಎಂದು ದೂರು ನೀಡುತ್ತಿದ್ದರು. ಆದರೂ ನಾವು ಕಡಿಮೆ ನೌಕರರನ್ನು ಇಟ್ಟುಕೊಂಡು ಚಿಕ್ಕ ಚಿಕ್ಕ ಸಾಧನೆ ಮಾಡಲು ಸಾಧ್ಯವಾಯಿತು. ಇದರಲ್ಲಿ ಸಾರ್ವಜನಿಕರ ಸಿಂಹ ಪಾಲು ಇದೆ ಎಂದು ಹೇಳಿದರು.
ಮನೆ ಮನೆಗೆ ಕಸ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕರ್ನಾಟಕದ ಪಾಲಿಕೆಗಳಲ್ಲಿ ನಾವು ನಂಬರ್ ಒನ್ ಬರಲು ಶ್ರಮಿಸುತ್ತೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೊಟ್ಟರೆ ನಾವು ರಾಷ್ಟ್ರಪತಿ ಪುರಸ್ಕಾರ ಪಡೆಯುತ್ತೇವೆ ಎಂದು ತಿಳಿಸಿದರು.
ನಗರದಲ್ಲಿ ಮಳೆಯ ಪ್ರಮಾಣ ತಗ್ಗಿದ್ದ ಹಿನ್ನೆಲೆಯಲ್ಲಿ ಗಣೇಶೋತ್ಸವದ ಒಳಗಾಗಿಯೇ ರಸ್ತೆಯ ಮೇಲೆ ಬಿದ್ದ ಗುಂಡಿಗಳನ್ನು ಮುಚ್ಚಿಸಲಾಗುತ್ತದೆ. ಈಗಾಗಲೇ ಕೆಲ ಕಡೆಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ಮುಚ್ಚಿಸಿದ್ದಾರೆ ಎಂದರು.
ನಗರದ ಕಸ ಸಂಗ್ರಹಕ್ಕೆ 36 ನೂತನ ವಾಹನ
