ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಪ್ರಕಟಿಸಿದ ತೀರಾ ಇತ್ತೀಚಿನ ಮಾಹಿತಿಯು ಹಿಂದಿನ ತಿಂಗಳಿಗೆ ಹೋಲಿಸಿದರೆ ಆಗಸ್ಟ್ 2024 ಕ್ಕೆ ಬೆಳಗಾವಿ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಯಲ್ಲಿ 8.3% ಕುಸಿತವನ್ನು ಸೂಚಿಸಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿನ ಈ ಇಳಿಕೆಗೆ ಬೆಳಗಾವಿ – ಜೋದಪುರ, ಬೆಳಗಾವಿ – ಸೂರತ್ ಮತ್ತು ಕಿಶನ್ಗಡ ಮಾರ್ಗಗಳಲ್ಲಿನ ವಿಮಾನಗಳ ರದ್ದತಿ ಕಾರಣವಾಗಿದೆ.
ಜುಲೈ 2024 ರಲ್ಲಿ ವಿಮಾನ ನಿಲ್ದಾಣ 27,860 ಪ್ರಯಾಣಿಕರು ಪಯಣಿಸಿದ್ದಾರೆ. ಆದರೆ ಕಳೆದ ಜನವರಿ 2024 ರಿಂದ ಆಗಸ್ಟ್ 2024 ರವರೆಗೆ ಒಟ್ಟು 2,35,000 ಪ್ರಯಾಣಿಕರು ಪ್ರಯಾಣ ಕೈಗೊಂಡಿದ್ದಾರೆ. ಏರ್ಲೈನ್ಸ್ – ಇಂಡಿಗೋ ಮತ್ತು ಸ್ಟಾರ್ ಏರ್ ಸಂಸ್ಥೆಗಳು ಬೆಳಗಾವಿಯಿಂದ ದೇಶದ 8 ನಗರಗಳಿಗೆ ತಡೆರಹಿತ ಹಾರಾಟ ನಡೆಸುತ್ತಿವೆ. ಇಂಡಿಗೋ ಬೆಂಗಳೂರು (ಎರಡು), ನವದೆಹಲಿ ಮತ್ತು ಹೈದರಾಬಾದ್ ಮಾರ್ಗಗಳಲ್ಲಿ ವಾರದ ಎಲ್ಲ ದಿನಗಳು. ಸ್ಟಾರ್ ಏರ್ ಈಗ 5 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಅಹಮದಾಬಾದ್, ಮುಂಬೈ, ನಾಗ್ಪುರ, ಜೈಪುರ ಮತ್ತು ತಿರುಪತಿ ಆಗಿದೆ.
ವಿಮಾನ ರದ್ದು: ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 8ರಷ್ಟು ಇಳಿಕೆ
