ಬೆಳಗಾವಿ,: ಮಹಾನಗರ ಪಾಲಿಕೆಗೆ ತೆರಿಗೆಯ ಹಣದಿಂದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಬಿ.ಪಿ. ರಸ್ತೆ ನಿರ್ಮಾಣದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಪಾಲಿಕೆ ವಿಶೇಷ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರೆಯಲಾದ ವಿಶೇಷ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
ವಿಪಕ್ಷಗಳ ಆಕ್ಷೇಪದ ನಡುವೆಯೂ ಭೂಸ್ವಾಧಿನ ಪರಿಹಾರದಲ್ಲಿ ವಿಳಂಬ ಮಾಡಿದ ಪಾಲಿಕೆ ಮೇಲೆ ಇರುವ ನ್ಯಾಯಂಗ ನಿಂಧನೆ ತಪ್ಪಿಸಲು ಪಾಲಿಕೆ ಆಯುಕ್ತರು ನಿರ್ಣಯ ತೆಗೆದುಕೊಂಡು 20 ಕೋಟಿ ಪರಿಹಾರ ತುಂಬಲು ಮೇಯರ್ ಸವಿತಾ ಕಾಂಬಳೆ ಸೂಚನೆ ನೀಡಿದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡಬೇಕು. ಈ ಬಾರಿ ಐದು ಕೋಟಿ ರೂ. ಪರಿಹಾರ ಕೊಡಬೇಕು ಎಂದು ಎಲ್ಲ ಸದಸ್ಯರು ತೀರ್ಮಾನಕ್ಕೆ ಬಂದಿದ್ದಾರೆ. ಗಣೇಶ ಹಬ್ಬ ಹಾಗೂ ಮಳೆಗಾಲದಿಂದ ಹಾನಿಯಾದ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಆದ್ದರಿಂದ ಒಂದು ವರ್ಷಗಳ ಕಾಲ ಸಮಯಾವಕಾಶ ನೀಡುವಂತೆ ಹೈಕೋರ್ಟ್ ಗೆ ಮನವಿ ಮಾಡಬೇಕು ಎಂದು ಎಲ್ಲ ಸದಸ್ಯರು ಒಮ್ಮತದಿಂದ ಹೇಳಿದ್ದಾರೆ ಎಂದರು.
ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ಹುಬ್ಬಳ್ಳಿ- ಧಾರವಾಡ, ವಿಜಯಪುರ ಪಾಲಿಕೆಗಿಂದ ಬೆಳಗಾವಿ ಮಹಾನಗರ ಪಾಲಿಕೆ ಉತ್ತಮ ಆಡಳಿತ ನೀಡಿದೆ. ಯಾವಾಗ ಯಾವಾಗ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಕಷ್ಟ ಬಂದಾಗ ಹಿಂದಿನ ಮೇಯರ್ ಗಳು ಹಾಗೂ ಪಾಲಿಕೆ ಸದಸ್ಯರು ಮಾಡಿದ್ದಾರೆ. ಈಗ ನೀವು ತೆಗೆದುಕೊಳ್ಳುವ ನಿರ್ಧಾರ ಪಾಲಿಕೆ ಉಳಿಸಿವ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಪಾಲಿಕೆ ವಿಪಕ್ಷ ನಾಯಕ ಮುಜಮ್ಮಿಲ್ ಡೋಣಿ ಮಾತನಾಡಿ, ಪಾಲಿಕೆಯಲ್ಲಿ ವಾಡ್೯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಪರಿಹಾರಕ್ಕೆ ಕೊಡಬಾರದು ಎಂದರು.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾದ ವೃತ್ತದಿಂದ ಹಳೆ ಪಿ.ಬಿ.ರಸ್ತೆ ಅಗಲೀಕರಣ ಮಾಡಿ ರಸ್ತೆ ಮಾಡಲು ಅನುಮತಿ ನೀಡಿರುತ್ತಾರೆ. ಕಳೆದ 2022ರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತದೆ.
ರಸ್ತೆ ಅಗಲಿಕರಣದಲ್ಲಿ ಬಾಳಾಸಾಹೇಬ ಪಾಟೀಲ್ ಎಂಬುವರು ರಸ್ತೆ ಅಗಲಿಕರಣದಲ್ಲಿ ನಾನು ಜಾಗೆ ಕಳೆದುಕೊಂಡಿದ್ದೇನೆ. ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ ಪರಿಹಾರ ಕೊಡಬೇಕೆಂದು ಕಳೆದ 2021ರಲ್ಲಿ 17 ಕೋಟಿ ರೂ. ನೀಡಬೇಕೆಂದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಗೆ ಮನವಿ ಮಾಡುತ್ತಾರೆ. ಬಳಿಕ ಅವರು ಹೈಕೋರ್ಟ್ ಗೆನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಾರೆ. ಇವರ ದೂರಿನ ಮೇಲೆ ಹೈಕೋರ್ಟ್ ಭೂಸ್ವಾಧಿನ ಪ್ರಕಾರ ಜಾಗೆ ಕಳೆದುಕೊಂಡ ಸಂತ್ರಸ್ತರಿಗೆ ಎರಡೂ ತಿಂಗಳಲ್ಲಿ ಪರಿಹಾರ ಕೊಡಬೇಕೆಂದು ಸೂಚನೆ ನೀಡಿದೆ ಎಂದು ಸಭೆಗೆ ತಿಳಿಸಿದರು.
ಸ್ಮಾರ್ಟ್ ಸಿಟಿ ಎಂ.ಡಿ ಸೈಯಿದಾ ಆಫ್ರಿನ್ ಬಾನು ಬಳ್ಳಾರಿ ಮಾತನಾಡಿ, ಶಹಾಪುರದ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆ ನಿರ್ಮಾಣ ಮಾಡುವಾಗ ಪಾಲಿಕೆಯಿಂದ ಅನುಮತಿ ಪಡೆದುಕೊಂಡು ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಅಜೀಂ ಪಟವೇಗಾರ, ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ ಎಂ.ಡಿ. ಸೈಯಿದಾ ಬಾನು ಆಫ್ರಿನ್ ಬಳ್ಳಾರಿ ಪ್ರತಿಕ್ರಿಯೆ ನೀಡಿ, ನಾವು ಅದು ಖಾಸಗಿ ಹಾಗೂ ಸರಕಾರಿ ಜಾಗ ನಮಗೆ ಸಂಬಂಧ ಇಲ್ಲ. ಆದರೆ ಪಾಲಿಕೆಯಿಂದ ಎನ್ ಓಸಿ ನೀಡಿದ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ನಾವು ಇಲ್ಲಿನ ಮನೆಗಳನ್ನು ತೆರವು ಮಾಡಿಲ್ಲ ಎಂದರು.
ಸರಕಾರದ ನಾಮ ನಿರ್ದೇಶಿತ ಸದಸ್ಯ ರಮೇಶ್ ಸೊಂಟಕ್ಕೆ ಮಾತನಾಡಿ, ನ್ಯಾಯಾಂಗ ನಿಂಧನೆಯಾಗಬಾರದು. ಹಾಗೆ ನೋಡಿಕೊಳ್ಳಬೇಕು. ನಿರಂತರ ಮಳೆಯಿಂದ ನಗರದ ರಸ್ತೆಗಳು ಹಾಳಾಗಿವೆ. ಅವುಗಳ ದೃಷ್ಟಿಯಿಂದ ನೋಡಿಕೊಂಡು ಮೇಯರ್ ಆದೇಶ ಮಾಡಬೇಕು. ಮತ್ತೊಂದು ಇಂಥ ಪ್ರಕರಣ ಬರದಂತೆ ಎಚ್ಚರಿಕೆ ವಹಿಸಬೇಕು. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಾಮನಿರ್ದೇಶಿತ ಸದಸ್ಯ ದಿನೇಶ್ ನಾಶಿಪುಡಿ ಮಾತನಾಡಿ, ಶಹಾಪುರದ ಬ್ಯಾಂಕ್ ಆಫ್ ಇಂಡಿಯಾದ ವೃತ್ತದಿಂದ ಹಳೆ ಪಿ.ಬಿ.ರಸ್ತೆ ಅಗಲೀಕರಣ ಮಾಡಿ ರಸ್ತೆ ಮಾಡಿರುವ ವಿಚಾರ ಪಾಲಿಕೆಯ ಕೌನ್ಸಿಲ್ ಗೆ ಬರುವ ಅವಶ್ಯಕತೆ ಇರಲಿಲ್ಲ ಎಂದರು.
ಉಪಮೇಯರ್ ಆನಂದ ಚೌಹಾನ್, ಪಾಲಿಕೆ ಸದಸ್ಯರಾದ ರಾಜಶೇಖರ ಡೋಣಿ, ಶಂಕರ ಪಾಟೀಲ್, ರವಿ ಸಾಳುಂಕೆ, ವೀಣಾ ಜೋಶಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭೂಸ್ವಾದೀನ ಪರಿಹಾರ ಪಾಲಿಕೆ ನೀಡಲಿದೆ
