ಬೆಳಗಾವಿ : ನಗರದಲ್ಲಿ ಮೇಲ್ಸೇತುವೆ ಪ್ರಸ್ತಾವನೆಗೆ ಕೊನೆಗೂ ಅನುಮೋದನೆ ದೊರೆತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಆದ್ದರಿಂದ ನಗರದಲ್ಲಿ
ಮೇಲ್ಸೇತುವೆ ಕಾಮಗಾರಿಗೆ ಇನ್ನು ಮುಂದೆ ಇನ್ನಷ್ಟು ವೇಗ ಸಿಗಲಿದೆ. ಮೇಲ್ಸೇತುವೆ ಪ್ರಸ್ತಾವನೆಗೆ 4.5 ಸಾವಿರ ಕೋಟಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
ಗಡ್ಕರಿ ಅವರು ಬೆಳಗಾವಿ ಪ್ರವಾಸದ ವೇಳೆ ಮೇಲ್ಸೇತುವೆಯ ಪ್ರಸ್ತಾಪ ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರಂತೆ ದೆಹಲಿಯಲ್ಲಿ
ಆ.13ರಂದು ಸಚಿವ ಗಡ್ಕರಿ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡುವೆ ಸಭೆ ನಡೆಸಲಾಗಿತ್ತು. ಮೇಲ್ಸೇತುವೆ ಪ್ರಸ್ತಾವನೆ ಕುರಿತು ವ್ಯಾಪಕ ಚರ್ಚೆ ನಡೆಯಿತು. ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರ ಜೊತೆಗೆ ಬೆಳಗಾವಿ-ಸಂಕೇಶ್ವರ ಷಟ್ಪಥ ರಸ್ತೆ, ವರ್ತುಲ ರಸ್ತೆ, ಹಲಗಾ-ಮಚ್ಚೆ ಬೈಪಾಸ್ ಮತ್ತಿತರ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿತಿನ್ ಗಡ್ಕರಿ ಸೂಚಿಸಿದರು. ಮೇಲ್ಸೇತುವೆಗಳಿಗೆ ಸಂಬಂಧಿಸಿದಂತೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು
ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಸಂಚಾರದ ಒತ್ತಡ ಕಡಿಮೆ ಮಾಡಲು ಈ ಯೋಜನೆ ಸಹಾಯಕವಾಗಲಿದೆ. ಬೆಳಗಾವಿ-ಸಂಕೇಶ್ವರ ಮಾರ್ಗದಲ್ಲಿ ವರ್ತುಲ ರಸ್ತೆ, ಬೈಪಾಸ್ ಹಾಗೂ ಷಟ್ಪಥ ರಸ್ತೆ ನಿರ್ಮಿಸಲಾಗುತ್ತಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಸಮೀಕ್ಷೆ ನಡೆಸಲಾಗಿದೆ. ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಬೆಳಗಾವಿ ನಗರದಲ್ಲಿ ‘ಫ್ಲೈ ಓವರ್’ ನಿರ್ಮಾಣಕ್ಕೆ ಗಡ್ಕರಿ ಹಸಿರು ನಿಶಾನೆ
