ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಕೆರೂರಿನ ನಕಲಿ ವೈದ್ಯನಿಗೆ ಒಂದು ವಾರ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪರಿಹಾರ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ರಿಯಾಜ್ ಮುಲ್ಲಾ ಶಿಕ್ಷೆಗೆ ಗುರಿಯಾದವ. ಚಿಕ್ಕೋಡಿ ತಾಲ್ಲೂಕು ಆರೋಗ್ಯಾಧಿಕಾರಿ ಮಾರ್ಚ್ 23ರಂದು ಈ ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದರು. ಆಲೋಪಥಿ ಔಷಧ ವಶಕ್ಕೆ ಪಡೆದಿದ್ದರು. ರಿಯಾಜ್ ವೈದ್ಯಕೀಯ ಪದವಿ ಮತ್ತು ಕೆಪಿಎಂಇ ನೋಂದಣಿ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದ ಎಂದು ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪರಿಹಾರ ಪ್ರಾಧಿಕಾರಕ್ಕೆ ಮಾರ್ಚ್ 25ರಂದು ವರದಿ ಸಲ್ಲಿಸಿದ್ದರು. ಪ್ರಾಧಿಕಾರ ಸಮಿತಿ ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೊಪ್ಪಿಕೊಂಡ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ 2007, 2009, ಕಾಯ್ದೆಯ ತಿದ್ದುಪಡಿ ಅಧಿಸೂಚನೆ 2018ರ ನಿಯಮ 19 ಉಪನಿಯಮ 1ರ ತಿದ್ದುಪಡಿ ಅಧಿಸೂಚನೆ, 2018ರ ಅಧಿನಿಯಮ 17 ಸೆಕ್ಷನ್ 19ರ ಉಪನಿಯಮದಂತೆ ಶಿಕ್ಷೆ ವಿಧಿಸಲಾಗಿದೆ.