ಬೆಳಗಾವಿ : ನಗರದ ಅಲಾರವಾಡ ಗ್ರಾಮದ ಅಡವಿಗಲ್ಲಿಯ
ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಮ್ಯಾಚ್‌ನ ಬಗ್ಗೆ ಬೆಟ್ಟಿಂಗ್
ಆಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ
ಮಾಳಮಾರುತಿ ಮತ್ತು ಅವರ ಸಿಬ್ಬಂದಿಯವರ ತಂಡ ದಾಳಿ ಮಾಡಿ ಆರೋಪಿತನಾದ
ಸಾಜೀದ ಸರದಾರ ಮುಲ್ಲಾ ಸಾ: ಅಲಾರವಾಡ ತಾ:ಜಿ: ಬೆಳಗಾವಿ ಇವನನ್ನು ವಶಕ್ಕೆ ಪಡೆದುಕೊಂಡು ಅವನಿಂದ ರೂ.24,700/- ಹಣ
ಜಪ್ತಪಡಿಸಿಕೊಳ್ಳಲಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಮುಂದುವರಿಸಲಾಗಿದೆ.