ಬೆಳಗಾವಿ : 1996 ರ ಮೇ ತಿಂಗಳಲ್ಲಿ ನಡೆದ  ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳು ದೇಶದ ಗಮನ ಸೆಳೆದಿದ್ದರು. ಅಲ್ಲದೇ ಚುನಾವಣಾ ಆಯೋಗಕ್ಕೂ ಸವಾಲಾಗಿ ಪರಿಣಮಿಸಿತ್ತು.

28 ವರ್ಷಗಳ ಹಿಂದೆ ಅಂದರೆ 1996ರಲ್ಲಿ 11ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಒಟ್ಟು 456 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಿಂದ ಬ್ಯಾಲೆಟ್ ಪೇಪರ ತಯಾರಿಸುವದು ಚುನಾವಣಾ ಆಯೋಗಕ್ಕೆ ಠಿಣವಾಗಿತ್ತು. ಅತಿ ದೊಡ್ಡ ಪ್ರಮಾಣದ ಬ್ಯಾಲೆಟ್‌ ಪೇಪರ್‌ ಬಳಸಿದ್ದ ಅಧಿಕಾರಿಗಳು 2-3 ದಿನಗಳ ಕಾಲ ನಿರಂತರವಾಗಿ ಮತ ಎಣಿಕೆ ಮಾಡಿದ್ದರು.ಅಲ್ಲದೇ 1985 ರಲ್ಲಿಯೂ ಕೂಡ 301 ಅಭ್ಯರ್ಥಿಗಳು ವಿಧಾನಸಭೆಗೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಮತದಾನ ಚೀಟಿ ನೀಡುವಂತೆ ಜಾಗೃತಿ ಮೂಡಿಸಲು 1985 ರಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು, ಮತ ವಿಭಜಿಸಲು 1996 ರಲ್ಲಿ ಎಂಇಎಸ್‌ನವರು 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್‌ನವರು 50ಕ್ಕೂ ಹೆಚ್ಚು ಜನರಿಂದ ನಾಮಪತ್ರ ಸಲ್ಲಿಸಿ ಕಣಕ್ಕಿಳಿಸಿದ್ದರು.

 64 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ಒಬ್ಬರು ನಾಮಪತ್ರ ಹಿಂಪಡೆದುಕೊಂಡರೆ ನೋಟಾ ಸೇರಿ 64 ಹೆಸರುಗಳನ್ನು ನಾಲ್ಕು ಮತಯಂತ್ರಗಳಲ್ಲಿ ಅಳವಡಿಸಲು ಸಾಧ್ಯವಿತ್ತು. ಆಗಲೂ ಅಧಿಕಾರಿಗಳಿಗೆ ಸಮಸ್ಯೆ ಎದುರಾಗಿತ್ತು.