ಪರಮಾನಂದವಾಡಿ : ಸ್ವಾಮಿ ವಿವೇಕಾನಂದರ ಆದರ್ಶ ಗುಣ, ತತ್ವ- ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ಕವಿತಾ ಘಟಕಾಂಬಳೆ ಅವರು ಹೇಳಿದರು.
ಪರಮಾನಂದವಾಡಿಯ
ಶ್ರೀ ಹಾಲಸಿದ್ದೇಶ್ವರ ಶಿಕ್ಷಣ ಸಂಸ್ಥೆ ಶಿರಗೂರ, ಶ್ರೀ ಜೆ.ಪಿ. ಶಿರಗೂರಕರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯಗಳ ಎನ್ ಎಸ್ ಎಸ್ ಘಟಕದ ಸಹಯೋಗದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದ ಅವರು, ಯುವಕರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದವರ ಆದರ್ಶ ಗುಣ, ತತ್ವ-ವಿಚಾರ ಅವರ ವ್ಯಕ್ತಿತ್ವದ ಉತ್ತಮ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಸಣ್ಣ ವಯಸ್ಸಿನಲ್ಲಿ ಇಡೀ ಜಗತ್ತು ಮೆಚ್ಚಿದ ಸಾಧನೆ ಮಾಡಿದ್ದಾರೆ. ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಬಾರದು. ತಂದೆ-ತಾಯಿ, ಗುರು- ಹಿರಿಯರಿಗೆ, ಸಮಾಜಕ್ಕೆ ಗೌರವ ಕೊಡಬೇಕು. ವಿವೇಕಾನಂದರು ಗುರುಗಳಾದ ರಾಮಕೃಷ್ಣರಿಗೆ ಅಪ್ಪಟ ಶಿಷ್ಯರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜು ವ ಕಾಂಬಳೆ ವಹಿಸಿದ್ದರು. ಅಶೋಕ ಶಿರಹಟ್ಟಿ, ದೇವೇಂದ್ರ ದುರದುಂಡಿ, ಎನ್ಎಸ್ಎಸ್ ಅಧಿಕಾರಿಗಳಾದ ಶಿವಾನಂದ ಚೌಗಲಾ, ಎಸ್ .ಎಂ. ಪಾಟೀಲ, ಎಂ.ಆರ್. ಬಂತಿ, ಆರ್ .ಎಚ್. ನಾಯಕ, ಮಲಕಾರಿ ಬೆಕ್ಕೇರಿ, ಕುಮಾರ ಭಜಂತ್ರಿ, ಸಂಸ್ಥೆಯ ಕಾರ್ಯದರ್ಶಿ ವಿಜಯ್ ವಸಂತ ದಳವಾಯಿ ಹಾಜರಿದ್ದರು.
ಯುವಕರು ವಿವೇಕಾನಂದರ ತತ್ವಾದರ್ಶಗಳಡಿ ಮುನ್ನಡೆಯಿರಿ
