ಬೆಳಗಾವಿ :ಗೋವಾದ ಸಂಖಲಿ-ಚೋರ್ಲಾ-ಬೆಳಗಾವಿ ಸಂಪರ್ಕಿಸುವ ರಸ್ತೆಗೆ ಪರ್ಯಾಯವಾಗಿ ಹೊಸ ಸಮಾನಾಂತರ ರಸ್ತೆಯನ್ನು ನಿರ್ಯೋಮಿಸಲು ಯೋಜನೆ ರೂಪಿಸಲಾಗಿದೆ. ಬೆಳಗಾವಿಯಿಂದ ಗೋವಾಗೆ ತೆರಳಲು ರಾಮನಗರ ಅಥವಾ ಚೋರ್ಲಾ ರಸ್ತೆ ಮೂಲಕ ಪ್ರಯಾಣ ಮಾಡಲಾಗುತ್ತಿದ್ದು, ಈ ರಸ್ತೆಗಳು ಅತ್ಯಧಿಕ ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ಪರ್ಯಾಯ ರಸ್ತೆ ನಿರ್ಮಾಣವಾದರೆ ಪ್ರಯಾಣ ಅತ್ಯಂತ ಸರಳವಾಗಲಿದೆ.
ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪರಿಶೀಲನಾ ಸಭೆಯ ನಂತರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೊಸ ಸಮಾನಾಂತರ ರಸ್ತೆ ಸಂಖ್ಲಿ-ಚೋರ್ಲಾ-ಬೆಳಗಾವಿ ನಿರ್ಮಾಣ ಯೋಜನೆಯನ್ನು ಘೋಷಿಸಿದರು.
ಪರಿಸರ ಸಂರಕ್ಷಣೆಗಾಗಿ ಬೆಳಗಾವಿ ಮೂಲಕ ಖಾನಾಪುರಕ್ಕೆ ಸಂಪರ್ಕ ಕಲ್ಪಿಸಲು ಸಮಾನಾಂತರ ರಸ್ತೆ ನಿರ್ಮಿಸಲು ಗೋವಾ ರಾಜ್ಯ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬೆಳಗಾವಿ-ಚೋರ್ಲಾ ಮೂಲಕ ಈ ರಸ್ತೆ ನಿರ್ಮಾಣಕ್ಕೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗೋವಾ ರಾಜ್ಯಕ್ಕೆ ಮನವಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಸಿಎಂ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಖಾತೆಯನ್ನೂ ಹೊಂದಿದ್ದಾರೆ.
ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಬೆಳಗಾವಿವರೆಗಿನ ರಸ್ತೆ ಅಗಲೀಕರಣಕ್ಕೆ ಹಲವು ದಿನಗಳಿಂದ ಬೇಡಿಕೆ ಇದೆ. ಚತುಷ್ಪಥ ರಸ್ತೆಯನ್ನು ಅಗಲೀಕರಣ ಮಾಡುವ ಬದಲು ಸಮಾನಾಂತರ ರಸ್ತೆ ನಿರ್ಮಿಸಿದರೆ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಸಾವಂತ್ ಹೇಳಿದರು.
ಅರಣ್ಯ ಇಲಾಖೆಯಿಂದ ಒಪ್ಪಿಗೆ ದೊರೆತರೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಗಡ್ಕರಿ ಅವರು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಗ್ ಮತ್ತು ಸಾವಂತ್ ಅವರೊಂದಿಗೆ ಅಧಿಕಾರಿಗಳು ನಡೆಯುತ್ತಿರುವ ಹೆದ್ದಾರಿ ಯೋಜನೆಗಳನ್ನು ಪರಿಶೀಲಿಸಿದರು.
ಅನಮೋಡದಿಂದ ಖಾನಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದ್ದು, ಕರ್ನಾಟಕಕ್ಕೆ ಹೋಗುವ ರಸ್ತೆಯೂ ಪೂರ್ಣಗೊಳ್ಳಲಿದೆ ಎಂದು ಸಾವಂತ್ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉಪಸ್ಥಿತರಿದ್ದರು.