ಸಮಾಜದ ಜನರೊಳಗೆ ಬೆರೆತು ವೈದ್ಯಕೀಯ ಸೇವೆ ನೀಡುವದರೊಂದಿಗೆ ಜಾಗೃತಿ ಮೂಡಿಸುವದು ಅತ್ಯವಶ್ಯ. ಅದರಲ್ಲಿಯೂ ಮುಖ್ಯವಾಗಿ ಹಿರಿಯ ನಾಗರೀಕರಲ್ಲಿ ಕಿವುಡತನ ಹಾಗೂ ಅಸಮತೋಲನದ ತೊಂದರೆ ಸಾಮಾನ್ಯವಾಗಿದ್ದು, ಅತ್ಯಂತ ಕಾಳಜಿಪೂರ್ವಕ ಅವಶ್ಯವಾದ ವಿವರಗಳೊಂದಿಗೆ ಅರಿವು ಮೂಡಿಸುವದು ಬಹುಮುಖ್ಯ ಕರ್ತವ್ಯ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರಿಂದಿಲ್ಲಿ ಹೇಳಿದರು.
ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕಿವಿ, ಮೂಗು, ಗಂಟಲು ವಿಭಾಗವು ದಿ. 16 ಸೆಪ್ಟಂಬರ 2023 ರಂದು ಏರ್ಪಡಿಸಲಾಗಿದ್ದ ಅಸಮತೋಲನ ಅರಿವು ಕಾರ್ಯಕ್ರಮ, ಅಡವಾನ್ಸ ವೆಸ್ಟಿಬುಲರ ಡಿಸಾರ್ಡರ ಮತ್ತು ಕಿವುಡತನ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕರ್ಯಾಗಾರದಲ್ಲಿ ಮಾತನಾಡಿದ ಅವರು ಗ್ರಾಮೀಣ ಜನರಲ್ಲಿ ಇದರ ಕುರಿತು ತಿಳುವಳಿಕೆ ಇಲ್ಲವೇ ಇಲ್ಲ. ಆದ್ದರಿಂದ ಯುವ ವೈದ್ಯರು ಸಮಾಜ ಮತ್ತು ಗ್ರಾಮೀಣ ಜನರ ನಡುವೆ ಬೆರೆತು ಸಮಗ್ರ ತಪಾಸಣೆ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಮತೋಲನ ಬಹಳ ಮುಖ್ಯ. ತಲೆ ತಿರುಗುವಿಕೆಯಿಂದ ಯಾವುದೇ ಕಾರ್ಯ ಮಾಡಲು ಅಸಾಧ್ಯ. ಹಿರಿಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅವರ ಆರೈಕೆ ಸರಿಯಾದ ಕ್ರಮದಲ್ಲಿ ಮಾಡಬೇಕಾಗಿದೆ. ಕಿವಿ ಕೇಳದಿದ್ದರೆ ಯಾವುದೇ ಸಂಭಾಷಣೆ ಮಾಡುವದೂ ಕೂಡ ಅಸಾಧ್ಯ. ಕಿವುಡತನ ಇದ್ದರೆ ಅಪಹಾಸ್ಯಕ್ಕೀಡಾಗುತ್ತೇವೆ. ಸಂವಹಣ ಸಾಮಾಜಿಕವಾಗಿ ಬಹಳ ಮುಖ್ಯ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಅವರು ಮಾತನಾಡಿ, ಕಿವಿಯ ರಚನೆಯು ಅತ್ಯಂತ ಸೂಕ್ಷ್ಮತೆಯನ್ಬು ಹೊಂದಿರುವ ದೇಹದ ಭಾಗ. ತೀವ್ರತರವಾದ ಕಿವುಡತ ಹೋಗಲಾಡಿಸುವದು ಸವಾಲಿನ ಕೆಲಸವಾಗಿದೆ. ಆಸ್ಪತ್ರೆಯಲ್ಲಿ ಕಾಕ್ಲಿಯರ ಇಂಪ್ಲ್ಯಾಂಟ ಶಸ್ತ್ರಚಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಅಲ್ಲದೇ ನೂತನವಾಗಿ ಅಲರ್ಜಿ ಕ್ಲಿನಿಕ್ ಕೂಡ ಪ್ರಾರಂಭಿಸಲಾಗಿದೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೂ ಕಲಿಕೆಯ ಜೊತೆಗೆ ನುರಿತ ತಜ್ಞರನ್ನಾಗಿ ಮಾಡಲು ಸಕಲ ವ್ಯವಸ್ಥೆನ್ನು ಕಲ್ಪಿಸಲಾಗುತ್ತಿದೆ ಎಂದ ಅವರು ಸಾರ್ವಜನಿಕರಲ್ಲಿ ಅರಿವು ಮೂಡಸಲು ಪ್ರಯತ್ನಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ ಉಪಸ್ಥಿರಿದ್ದರು. ಇಎನ್ಟಿ ವಿಭಾಗ ಮುಖ್ಯಸ್ಥರಾದ ಡಾ. ಬಿ ಪಿ ಬೆಳಲದವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ.ಪ್ರಶಾಂತ ಪಾಟೀಲ, ಡಾ. ವಿನಿತಾ ಮೆಟಗುಡಮಠ, ಡಾ. ಅನಿಲ ಹಾರುಗೊಪ್ಪ ಡಾ. ರಾಜೇಂದ್ರ ಮೆಟಗುಡಮಠ, , ಡಾ. ಡಾ. ಪ್ರೀತಿ ಹಜಾರೆ, ಡಾ. ನಿತಿನ ಅಂಕಲೆ, , ಡಾ. ರಾಜೇಂದ್ರ ಮೆಟಗುಡಮಠ, , ಡಾ. ಪ್ರೀತಿ ಶೆಟ್ಟಿ, ಡಾ. ರಾಜೇಶ ಹವಾಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.