ಬೆಳಗಾವಿ: ಗೋವಾದ ಮದ್ಯವನ್ನು ತೆಲಗು ಸಿನಿಮಾ ಪುಷ್ಪ ಶೈಲಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೃಹತ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಬೆಳಗಾವಿಯ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದು, ಉತ್ತರ ಪ್ರದೇಶದ ಬನಾರಸ ಮೂಲದ ವಿರೇಂದ್ರ ಎಂಬ ಚಾಲಕನನ್ನು ಬಂಧಿಸಿದ್ದಾರೆ.

ಶುಕ್ರವಾರ ತಡರಾತ್ರಿ ಗೋವಾದಿಂದ ಪ್ಲೈವುಡ್ ತುಂಬಿದ ಲಾರಿಯಲ್ಲಿ ವಿವಿಧ ಬ್ರಾಂಡನ  120ಕ್ಕೂ ಅಧಿಕ‌ 2ರಿಂದ 3 ಲೀಟರ್  ಮದ್ಯದ ಬಾಟಲ್ಗಳನ್ನು ಸಾಗುತ್ತಿರುವ ವೇಳೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಲಾರಿಯು ಗೋವಾದಿಂದ ನೇರವಾಗಿ ಬೆಳಗಾವಿಗೆ ಆಗಮಿಸದೇ ಮದ್ಯ ಕರ್ನಾಟಕಕ್ಕೆ ತೆರಳಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬರುತ್ತಿದ್ದ ಸಂದರ್ಭದಲ್ಲಿ ಸುವರ್ಣ ಸೌಧದ ಎದುರು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಅಬಕಾರಿ ಇಲಾಖೆ ಅಧಿಕಾರಿಗಳು 

ಗೋವಾದಿಂದ ಬಂದ ಲಾರಿಯಲ್ಲಿ ಪ್ಲಾವುಡ್ ತುಂಬಲಾಗಿತ್ತು. ನಾಲ್ಕು ದಿಕ್ಕಿನಿಂದ ನೋಡಿದರೂ ಕೂಡ ಪ್ಲೈವುಡ ಕಂಡು ಬರುವಂತೆ ಮಾಡಿ ಅದರ ಮದ್ಯದಲ್ಲಿ ಬಾವಿಯಂತೆ ಕೊರೆದು ಅದರಲ್ಲಿ ಲಕ್ಷಂತರ ಮೌಲ್ಯದ ಸರಾಯಿ ಪೆಟ್ಟಿಗೆಗಳನ್ನು ಇಟ್ಟು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು.  ನಡೆಸಲಾಗುತ್ತಿತ್ತು.