ಬೆಳಗಾವಿ : ತಾನೇ ಕದ್ದು ತನ್ನ ಅಂಗಡಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಇಡೀ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ
ಜು.17 ರಂದು ಕೃಷ್ಣಾನಂದ ವಿಶ್ವನಾಥ ವೇರ್ಣೆಕರ, ಸಾ: ಸಾವರಕರ ರೋಡ್ ತಿಲಕವಾಡಿ, ಬೆಳಗಾವಿ ಇವನು ಬೆಳಗಾವಿ ರಾಮದೇವಗಲ್ಲಿಯಲ್ಲಿರುವ ವ್ಹಿ. ಪಿ. ವೇರ್ಣೇಕರ & ಸನ್ಸ್ ಅಂಬುವ ಬಂಗಾರದ ಅಂಗಡಿಯನ್ನು ಜು.16 ರಂದು ರಾತ್ರಿ ಯಾರೋ ಆರೋಪಿತರು ಅಂಗಡಿಯ ಬಾಗಿಲನ್ನು ಮುರಿದು ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪಿಐ ಖಡೇಬಜಾರ ಠಾಣೆ & ಸಿಬ್ಬಂದಿಯವರು ಘಟನಾವಳಿಗಳನ್ನು ಆಧರಿಸಿ ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸಲಾಗಿ ತನಿಖಾಧಿಕಾರಿಗಳಿಗೆ ಪಿರ್ಯಾದಿಯ ಮೇಲೆ ಸಂಶಯ ಬಂದು ಆತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ, ಪಿರ್ಯಾದಿ ಕೃಷ್ಣಾನಂದ ವಿಶ್ವನಾಥ ವೇರ್ಣೆಕರ, ಸಾ: ಸಾವರಕರ ರೋಡ್ ತಿಲಕವಾಡಿ ಬೆಳಗಾವಿ ಇವನೇ ತಮ್ಮ ಅಂಗಡಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ ಹಣವನ್ನು ತೆಗೆದುಕೊಂಡು ತಮ್ಮ ಕೆಂಪು ಬಣ್ಣದ ಆ್ಯಕ್ಟೀವಾ ಸ್ಕೂಟಿ ನಂಬರ: ಕೆಎ-22/ಇಡಬ್ಲೂ4822 ಸ್ಕೂಟಿಯ ಡಿಕ್ಕಿಯಲ್ಲಿ ಹಾಕಿಕೊಂಡು ಹೋದ ಬಗ್ಗೆ ತನಿಖೆಯಿಂದ ಕಂಡು ಬಂದಿರುತ್ತದೆ. ಈ ಬಗ್ಗೆ ಅವನು ಒಪ್ಪಿಕೊಂಡಾಗ ಕೂಡಲೇ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡು ಆರೋಪಿತನಿಂದ 1) ರೂ.45,೦೦೦/- ಮೌಲ್ಯದ ಸ್ಕೂಟಿ ದ್ವಿಚಕ್ರ ವಾಹನ 2) ರೂ.62,60,990/- ಮೌಲ್ಯದ 519.8 ಗ್ರಾಂ, ಬಂಗಾರದ ಆಭರಣಗಳನ್ನು 3) ರೂ.6,೦೦೦/- ಮೌಲ್ಯದ 31 ಗ್ರಾಂ, ಬೆಳ್ಳಿಯ ಆಭರಣಗಳನ್ನು ಹಾಗೂ ೪) ರೂ. 2,83,010/- ರೂ ನಗದು ಹಣವನ್ನು ಹೀಗೆ ಆತನಿಂದ ಒಟ್ಟು 65,95,000 /- ರೂ ಕಿಮ್ಮತ್ತಿನ ಸ್ವತ್ತನ್ನು ಜಪ್ತಪಡಿಸಿಕೊಂಡು ಸದರಿ ಪ್ರಕರಣದಲ್ಲಿ ಫಿರ್ಯಾದಿ ಭಾಗಿಯಾಗಿದ್ದರಿಂದ ಸದರಿಯವನ ಮೇಲೆ ತನಿಖೆ ಕೈಕೊಂಡು ದೊಷಾರೋಪಣ ಪತ್ರ ಸಲ್ಲಿಸಲಾಗುವುದು. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಖಡೇಬಜಾರ ಠಾಣೆಯ ಪಿಐ ಎಮ್, ಕೆ, ಧಾಮನ್ನವರ, ಎಸ್, ಆರ್, ಮುತ್ತತ್ತಿ, ಪಿಎಸ್‌ಐ ಸಿಬ್ಬಂದಿ ಎ. ಬಿ. ಶೆಟ್ಟಿ, ಸಂತೋಷ ಬರಗಿ, ಬಿ, ಎಲ್, ಸರ್ವಿ, ಚನ್ನಪ್ಪ ತೇಲಿ, ಆರತಿ ಹೆಗ್ಗಣ್ಣ, ಸುನೀಲ ಚವ್ಹಾಣ, ಸದಾಶಿವ ಹಲಗಿಮನಿ, ಪ್ರಕಾಶ ಮಾದರ, ಹಾಗೂ ಬೆರಳು ಮುದ್ರೆ ಘಟಕದ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿ ಮತ್ತು ಸೋಕೋ ವಿಭಾಗ ಸಿಬ್ಬಂದಿಯವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ತಂಡವನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.