ಬೆಳಗಾವಿ : ವಿಪರೀತ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಿಂಗಾಪೂರ ಪೇಟ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ ವಯಸ್ಸು 75 ವರ್ಷ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ವಾಮನ್ ರಾವ್ ಬಾಪೂ ಪವಾರ್ ವ್ಯಕ್ತಿ ಮನೆಯಲ್ಲಿ ಮಲಗಿರುವಾಗ ಬುಧವಾರ ಬೆಳಿಗ್ಗೆ 4.ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣಿ ಕುಸಿದು ಅವರ ಮೇಲೆ ಬಿದ್ದು ಇವರು ಮಣ್ಣಿನಲ್ಲಿ ಹುದುಗಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ ಎಂದು ತಿಳಿದು ಬಂದಿದೆ.
ಘಟನಾಸ್ಥಳಕ್ಕೆ ರಾಮದುರ್ಗ ಅಗ್ನಿಶಾಮಕ ದಳದವರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಸದರಿ ಅವರನ್ನು ಪತ್ತೆ ಮಾಡಿ ಮೃತ ದೇಹವನ್ನು ಹೊರಗಡೆ ತೆಗೆದಿದ್ದಾರೆ.
ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಡೆ ಕುಸಿದು ವೃದ್ದ ಸಾವು
