ಬೆಳಗಾವಿ: ಬೆಳಗಾವಿ – ದೆಹಲಿ ಮತ್ತು ಬೆಂಗಳೂರು – ಬೆಳಗಾವಿ ನಡುವೆ ಮುಂಬರುವ ದಿ. 16 ಸೆಪ್ಟೆಂಬರ್ 2025 ರಂದು ಮತ್ತು 21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಸಂಸದರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಇಂಡಿಗೋ ಬೆಳಗಾವಿ – ದೆಹಲಿ ನಡುವಿನ ತನ್ನ ಸಂಚಾರವನ್ನು ಎರಡು ದಿನಗಳಿಗೊಮ್ಮೆ ನಡೆಸುತ್ತಿತ್ತು ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬೆಳಗಿನ ಸಂಚಾರವನ್ನು ರದ್ದು ಮಾಡಲಾಗಿತ್ತು.
ಇಂಡಿಗೋ ವಿಮಾನಯನ ಅಧಿಕಾರಯೊಂದಿಗೆ ಸಭೆ ನಡೆಸಿ, ಒತ್ತಾಯಿಸಲಾಗಿತ್ತು. ದಿನನಿತ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಸಂಸದ ಜಗದೀಶ ಶೆಟ್ಟರ್ ಅವರು ಸಂತಸ ವ್ಯಕ್ತಪಡಿಸಿ, ಇಂಡಿಗೋ ವಿಮಾನಯಾನ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.