ಬೆಳಗಾವಿ: ರಾಜ್ಯ ಸರಕಾರವು  ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ವಹಿಸಿ ಆದೇಶ ಹೊರಡಿಸಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲೆಯವರೆ ಆದ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಈ ಹಿಂದೆ ಬೇರೆ ಜಿಲ್ಲೆಯವರಾದ ಜಗದೀಶ ಶೆಟ್ಟರ ಹಾಗೂ ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಲಾಗಿತ್ತು. ಸುಮಾರು 10 ವರ್ಷಗಳ ನಂತರ ಜಾರಕಿಹೊಳಿ ಕುಟುಂಬವು ಮತ್ತೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದೆ.

ಸಚಿವರು ಮತ್ತು ಜಿಲ್ಲೆಗಳ ವಿವರ ಕೆಳಗೆ ನೀಡಲಾಗಿದೆ.

ಡಿ.ಕೆ.ಶಿವಕುಮಾರ್-ಬೆಂಗಳೂರು ನಗರ

ಡಾ.ಜಿ ಪರಮೇಶ್ವರ್ -ತುಮಕೂರು

ಹೆಚ್.ಕೆ.ಪಾಟೀಲ್-ಗದಗ

ಕೆ.ಹೆಚ್.ಮುನಿಯಪ್ಪ -ಬೆಂಗಳೂರು ಗ್ರಾಮಾಂತರ

ರಾಮಲಿಂಗಾ ರೆಡ್ಡಿ-ರಾಮನಗರ

ಕೆ.ಜೆ.ಜಾರ್ಜ್-ಚಿಕ್ಕಮಗಳೂರು

ಎಂ.ಬಿ.ಪಾಟೀಲ್ -ವಿಜಯಪುರ

ದಿನೇಶ್ ಗುಂಡೂರಾವ್ -ದಕ್ಷಿಣ ಕನ್ನಡ

ಹೆಚ್.ಸಿ.ಮಹದೇವಪ್ಪ-ಮೈಸೂರು

ಪ್ರಿಯಾಂಕ್ ಖರ್ಗೆ -ಕಲಬುರಗಿ

ಶಿವಾನಂದ ಪಾಟೀಲ್ -ಹಾವೇರಿ

ಜಮೀರ್ ಅಹಮದ್ ಖಾನ್ -ವಿಜಯನಗರ

ಶರಣಬಸಪ್ಪ ದರ್ಶನಾಪುರ-ಯಾದಗಿರಿ

ಈಶ್ವರ್ ಖಂಡ್ರೆ- ಬೀದರ್

ಚಲುವರಾಯ ಸ್ವಾಮಿ-ಮಂಡ್ಯ

ಎಸ್ . ಎಸ್. ಮಲ್ಲಿಕಾರ್ಜುನ-ದಾವಣಗೆರೆ

ಸಂತೋಷ ಲಾಡ್-ಧಾರವಾಡ

ಡಾ. ಶರಣಪ್ರಕಾಶ್ ಪಾಟೀಲ್-ರಾಯಚೂರು

ಆರ್.ಬಿ. ತಿಮ್ಮಾಪುರ-ಬಾಗಲಕೋಟೆ

ಕೆ.ವೆಂಕಟೇಶ್-ಚಾಮರಾಜನಗರ

ಶಿವರಾಜ್ ತಂಗಡಗಿ -ಕೊಪ್ಪಳ

ಡಿ.ಸುಧಾಕರ್-ಚಿತ್ರದುರ್ಗ

ಬಿ.ನಾಗೇಂದ್ರ-ಬಳ್ಳಾರಿ

ಕೆ.ಎನ್.ರಾಜಣ್ಣ-ಹಾಸನ

ಭೈರತಿ ಸುರೇಶ್ -ಕೋಲಾರ

ಮಂಕಾಳ ವೈದ್ಯ -ಉತ್ತರಕನ್ನಡ

ಮಧುಬಂಗಾರಪ್ಪ -ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್ -ಚಿಕ್ಕಬಳ್ಳಾಪುರ

ಎನ್.ಎಸ್. ಬೋಸರಾಜು- ಕೊಡಗು