ಬೆಳಗಾವಿ.: ಬೆಳಗಾವಿ, : ಬೆಳಗಾವಿಯ ಇಬ್ಬರು ಅಧಿಕಾರಿಗಳು ಸೇರದಂತೆ ರಾಜ್ಯದ ಬೆಂಗಳೂರು ನಗರ-2, ಬಾಗಲಕೋಟೆ-1, ಚಿತ್ರದುರ್ಗ-1 ಮತ್ತು ರಾಯಚೂರುಗಳಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣಗಳ ಸರಕಾರಿ ಅಧಿಕಾರಿಗಳ ವಿರುದ್ಧ ರಾಜ್ಯ ಲೋಕಾಯುಕ್ತ ಪೊಲೀಸರು ಇಂದು ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಿದರು.
ಆರೋಪಿತ ಸರ್ಕಾರಿ ಅಧಿಕಾರಿಗಳ ಸಂಬಂಧಿಕರ ನಿವಾಸಗಳು, ಕಚೇರಿಗಳು ಸೇರಿದಂತೆ ಏಕಕಾಲಕ್ಕೆ 27 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಯಿತು.
ಬೆಳಗಾವಿಯ ಉತ್ತರದ ಸಬ್ ರಜಿಸ್ಟಾರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ
ಸಚಿನ್ ಬಸವಂತ್ ಮಾಂಡೆಡ್ ಉರ್ಫ ಮಂಡೇದಾರ್ ಅವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಿದಾಗ (ಎ) ಸ್ಥಿರ ಆಸ್ತಿಗಳ ಮೌಲ್ಯ- 1 ಸೈಟ್, 1 ನಿರ್ಮಾಣ ಹಂತದಲ್ಲಿರುವ ಮನೆ, 1-12 ಎಕರೆ ಕೃಷಿ ಭೂಮಿ– ಒಟ್ಟು ಮೌಲ್ಯ ರೂ. 58,00,000/- (ಬಿ) ಚರ ಆಸ್ತಿಗಳ ಮೌಲ್ಯ – ರೂ. 1,35,000/- ನಗದು, ರೂ. 87,27,559/- ಮೌಲ್ಯದ ಆಭರಣಗಳು, ರೂ. 2,50,000/- ಮೌಲ್ಯದ ವಾಹನಗಳು, ರೂ. 1,01,00,000/- ಬ್ಯಾಂಕ್ ಠೇವಣಿ, ಮ್ಯೂಚುಯಲ್ ಫಂಡ್, ಇಕ್ವಿಟಿ ಷೇರುಗಳು.- ಒಟ್ಟಾರೆ ಮೌಲ್ಯ ರೂ. 1,92,12,559/- (ಸಿ) ಒಟ್ಟು ಮೌಲ್ಯ 2,50,12,559/- ರೂ.ಗಳು.
ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಪಶು ವೈದ್ಯಕೀಯ ಸಂಜಯ್ ನಿರೀಕ್ಷಕರಾದ ಅಣ್ಣಪ್ಪ ದುರ್ಗಣ್ಣವರ್ ಅವರಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ದಾಳಿಯಲ್ಲಿ (ಎ) ಸ್ಥಿರ ಆಸ್ತಿಗಳ ಮೌಲ್ಯ – 4 ಸೈಟ್‌ಗಳು, 1 ಮನೆ, 1 ಏಕರ್ ಕೃಷಿ ಭೂಮಿ, ಒಟ್ಟಾರೆ ಮೌಲ್ಯ ರೂ. 50,77,000/- (ಬಿ) ಚರ ಆಸ್ತಿಗಳ ಮೌಲ್ಯ– ರೂ. 2,190/- ನಗದು, ರೂ. 9,92,324/- ಮೌಲ್ಯದ ಆಭರಣಗಳು, ರೂ. 4,50,000/- ಮೌಲ್ಯದ ವಾಹನಗಳು, ರೂ. 8,86,000/- ಇತರ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳು – ಒಟ್ಟು ಮೌಲ್ಯ ರೂ. 23,30,514/- (ಸಿ) ಒಟ್ಟು ಮೌಲ್ಯ – ರೂ. 74,07,514/-
ಸಚಿನ್ ಬಸವಂತ್ ಮಾಂಡೆದ (ಮಂದೇದಾರ್)
ಮನೆಗಳು ಮತ್ತು ಭೂಮಿ – 5800000
ನಗದು – 1,35,000
ಆಭರಣಗಳು – 8727559
ವಾಹನಗಳು – 2,50,000
ಇತರೆ – 101,00,000
ಒಟ್ಟು ಆಸ್ತಿ ಮೌಲ್ಯ – 2,50,12,559

ಸಂಜಯ್ ಅಣ್ಣಪ್ಪ ದುರ್ಗಣ್ಣವರ್

ಮನೆಗಳು ಮತ್ತು ಭೂಮಿ – 5077000

ನಗದು – 2190

ಆಭರಣಗಳು – 992324

ವಾಹನಗಳು – 450000

ಇತರೆ – 886000

ಒಟ್ಟು ಆಸ್ತಿ ಮೌಲ್ಯ – 74,07,514
ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ಇಬ್ಬರು ‌ಅಧಿಕಾರಿಗಳ ಮೇಲೆ ನಿವಾಸದ ಮೇಲೆ ದಾಳಿ ನಡೆಸಿ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಉತ್ತರ ಸಬ್ ರಿಜಿಸ್ಟರ್ ಸಚೀನ‌ ಮಂಡೇದ ಹಾಗೂ ಪಶುವೈದ್ಯ ಸಂಜಯ ದುರ್ಗನ್ನವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಬೆಳಗಾವಿ ಆನಗೋಳ ಹಾರೋಗೇರಿ,ಬೆಲ್ಲದ ಬಾಗೇವಾಡಿ ಸೇರಿ ಮೂರು ಕಡೆಗಳಲ್ಲಿ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.