ದೆಹಲಿ,: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ದೆಹಲಿಯಲ್ಲಿ ನಿಧನರಾದರು.
ಶಾಂತ ಸ್ವಭಾವ ಸಿಂಗ ಅವರು ಎರಡು ಬಾರಿ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2004 ರಿಂದ 2014 ರವರೆಗೆ ಯುಪಿಎ ಸರಕಾರದ ಪ್ರಧಾನಿಯಾಗಿದ್ದರು. ಜ್ಞಾನ ಮತ್ತು ಅಪ್ರತಿಮ ದೃಷ್ಟಿಕೋನದಿಂದ ದೇಶದ ಆರ್ಥಿಕತೆ ಹಾಗೂ ಆಡಳಿತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದಿದ್ದರು.1991ರಲ್ಲಿ ಹಣಕಾಸು ಸಚಿವರಾಗಿ ಅವರು ತೋರಿದ ನಿಪುಣತೆ ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬದಲಾಯಿಸಿತ್ತು.