ಬೆಳಗಾವಿ : ಬಿಎಸ್ಎಫ್ ಯೋಧ ಚಾಕು ಇರಿದ ಘಟನೆ ಬೆಳಗಾವಿ ಎಪಿಎಂಸಿ ರಸ್ತೆಯ ಆಯಿ ಹೋಟೆಲ್ ನಲ್ಲಿ ನಡೆದಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಯಲ್ಲಿ ಯೋಧನು ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ. ರುಕ್ಮಿಣಿ ನಗರದ ಪರಶುರಾಮ ರಾಮಗೊಂಡನವರ ಊಟಕ್ಕೆ ಹೊಟೇಲ್ ಗೆ ಬಂದಿದ್ದ. ಬಿಎಸ್ಎಫ್ ಯೋಧನಾಗಿರುವ ಈತ ಅಲ್ತಾಫ್ ಗೆ ಇರಿದಿದ್ದು, ಈಗ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಟೆಲಿಗೆ ಗ್ಯಾಂಗ್ ವಾಡಿಯ ಯುವಕರು ಊಟಕ್ಕೆ ಬಂದಿದ್ದರು. ಹೋಟೆಲ್ ಮಾಲೀಕನ ಜೊತೆ ಜಗಳವಾಡಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲೇ ಇದ್ದ ಪರಶುರಾಮ ಹಾಗೂ ಯುವಕರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಲ್ಲಿ ಅಂತ್ಯ: ಸಹೋದರರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಬೈಲಹೊಂಗಲ ತಾಲೂಕಿನ ಅಮಟೂರ-ಬೇವಿನಕೊಪ್ಪ ರಸ್ತೆಯ ಮೇಲೆ ಸೋಮವಾರ ಘಟನೆ ನಡೆದಿದೆ. ಅಮಟೂರ ಗ್ರಾಮದ ಕೇದಾರ ಯಲ್ಲಪ್ಪ ಅಂಗಡಿ(42) ಕೊಲೆಯಾದವ.
ತಮ್ಮ ಜಮೀನಿನಲ್ಲಿ ಬೇರೆಯವರಿಗೆ ದಾಟಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಈತ ಮೃತಪಟ್ಟಿದ್ದಾನೆ.

ಬಾಳಪ್ಪ ಶಿವಾನಂದ ಅಂಗಡಿ (21), ಶಿವಾನಂದ ಬಾಳಪ್ಪ ಅಂಗಡಿ (51), ಆತ್ಮಾನಂದ ಶಿವಾನಂದ ಅಂಗಡಿ(15) ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಬೈಲಹೊಂಗಲ ಪೊಲೀಸರು ಜಾಲ ಬೀಸಿದ್ದಾರೆ.