ಬೆಳಗಾವಿ : ಹುಬ್ಬಳ್ಳಿ-ಬೆಳಗಾವಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆಯಾಗಿದೆ. ಬೆಳಗಾವಿ ಮತ್ತು ಧಾರವಾಡದಲ್ಲಿ ರೈಲು ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ರೈಲು ಸಂಖ್ಯೆ 20670 ಪುಣೆ-ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.
ವೇಳಾಪಟ್ಟಿ ಬದಲಾವಣೆ:
ವಂದೇ ಭಾರತ್ ರೈಲು ಸದ್ಯ ಬೆಳಗಾವಿಗೆ ರಾತ್ರಿ 8.35 ಕ್ಕೆ ಆಗಮಿಸಿ 8.40 ಕ್ಕೆ ಹೊರಡುತ್ತಿತ್ತು. ಅಕ್ಟೋಬರ್ 3 ರಿಂದ ರಾತ್ರಿ 8.15 ಕ್ಕೆ ಆಗಮಿಸಿ 8.20 ಕ್ಕೆ ಹೊರಡಲಿದೆ.
ವಂದೇ ಭಾರತ್ ರೈಲು ಸದ್ಯ ಧಾರವಾಡ ನಿಲ್ದಾಣಕ್ಕೆ ರಾತ್ರಿ 10.20 ಕ್ಕೆ ಆಗಮಿಸಿ 10.22 ಕ್ಕೆ ನಿರ್ಗಮಿಸುತ್ತಿತ್ತು. ಅಕ್ಟೋಬರ್ 3 ರಿಂದ ರಾತ್ರಿ 10.13 ಕ್ಕೆ ಆಗಮಿಸಿ 10.15 ನಿರ್ಗಮಿಸುತ್ತದೆ.
ಬೆಳಗಾವಿ – ಪುಣೆ ವಂದೇ ಭಾರತ ವೇಳೆಯಲ್ಲಿ ಬದಲಾವಣೆ
