ಬೆಳಗಾವಿ,:ಧಾರಕಾರವಾಗಿ ಮಳೆಯು ಸುರಿಯುತ್ತಿರುವುರಿಂದ ಶಾಲೆಗಳಲ್ಲಿ ಮಳೆ ನೀರು ಹರಿದು ಮತ್ತು ಹಲವು ಶಾಲಾ ಕಟ್ಟಡಗಳು ಸೋರುತ್ತಿರುವುದರಿಂದ ದಿ: ಜುಲೈ 25 ಮತ್ತು 26 ರಂದು ಎರಡು ದಿನ ಬೆಳಗಾವಿ, ಖಾನಾಪೂರ, ಬೈಲಹೊಂಗಲ, ಕಿತ್ತೂರ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಮೊಹ್ಮದ ರೋಶನ ಅವರು ರಜೆ ಘೋಷಿಸಿದ್ದಾರೆ. ನಾಲೈದು ದಿನಗಳಿಂದ ಬೆಳಗಾವಿ, ಖಾನಾಪೂರ, ಬೈಲಹೊಂಗಲ, ಕಿತ್ತೂರ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಿಗೂ ಕೂಡ ಎರಡು ದಿನ ರಜೆ ನೀಡಲಾಗಿದೆ.
ವ್ಯಾಪಕ ಮಳೆ: ಜಿಲ್ಲೆಯ 6 ತಾಲ್ಲೂಕಿನ ಶಾಲೆಗಳಿಗೆ ಇನ್ನೆರಡು ದಿನ
