ಬೆಳಗಾವಿ :ಸವದತ್ತಿ ತಾಲೂಕಿನ ( ಬೈಲಹೊಂಗಲ ಸಮೀಪ) ಹೊಸೂರು ಗ್ರಾಮದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ.
ಮಂಜು ಕೋಲಕಾರ( 25) ಕೊಲೆಯಾದ ಯುವಕನಾಗಿದ್ದು,ಕೊಲೆಗೆ ನೀಕರ ಕಾರಣ ತಿಳಿದುಬಂದಿಲ್ಲ. ಸಮೀಪದ ವಕ್ಕುಂದ ಗ್ರಾಮದಲ್ಲಿರುವ ತನ್ನ ಸಹೋದರ ಮಂಜುನಾಥನಿಗೆ ಔಷಧಿ ಕೊಡಲು ತನ್ನ ಸ್ನೇಹಿತನೊಂದಿಗೆ ತೆರಳಿದ್ದ. ಸ್ನೇಹಿತನೇ ಕೊಲೆ ಮಾಡಿರುವ ಅನುಮಾನವಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.