ಬೆಳಗಾವಿ : ರೋಟರಿ ಅನ್ನೋತ್ಸವ ಜ.5 ರಿಂದ 14 ರ ವರೆಗೆ ನಗರದ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ.
ಮೊದಲ ದಿನ ಅಖಿಲ ಭಾರತ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ. ಎರಡನೇ ದಿನ ಮಹಿಳೆಯರಿಗೆ ಮಿಸ್ಸೆಸ್ ಬೆಳಗಾವಿ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಆಹಾರ ಮೇಳದಲ್ಲಿ 15 ರಿಂದ 20 ರಾಜ್ಯಗಳಿಂದ ವಿವಿಧ ಆಹಾರ ಮಳಿಗೆಗಳು ಭಾಗವಹಿಸಲಿವೆ. ಪ್ರತಿದಿನ 15 ರಿಂದ 20,000 ಜನ ಅನ್ನೋತ್ಸವಕ್ಕೆ ಆಗಮಿಸುವ ಸಾಧ್ಯತೆ ಇದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಗ್ರಾಹಕ ಮಳಿಗೆಗಳು ಭಾಗವಹಿಸಲಿವೆ.
ಬೆಂಗಳೂರು, ಪುಣೆ, ಗೋವಾ ಗಳಿಂದ ಆರ್ಕೆಸ್ಟ್ರಾಗಳು ಆಗಮಿಸಲಿದೆ.
27 ವರ್ಷಗಳಿಂದ ಬೆಳಗಾವಿಯಲ್ಲಿ ಅನ್ನೋತ್ಸವ ನಡೆಯುತ್ತಿದೆ. 155 ಮಳಿಗೆಗಳು ಈ ಸಲ ವಿಶೇಷ ಆಕರ್ಷಣೆಗಳಾಗಿವೆ.