ಬೆಳಗಾವಿ: ನಗರದ ಬಸವೇಶ್ವರ ವೃತ್ತದ ಬಳಿಯ ತಿನಿಸು ಕಟ್ಟೆಯ ಮಳಿಗೆಗಳನ್ನು       ಕಾನೂನು ಬಾಹಿರವಾಗಿ ಪಡೆದಿರುವ ಪಾಲಿಕೆಯ ಸದಸ್ಯರ ಸದಸ್ಯತ್ವವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ಸೋಮವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಪಾಲಿಕೆ ಸದಸ್ಯರಾದ ವಾರ್ಡ್ ನಂಬರ್ 23 ರ ಸದಸ್ಯ ಜಯಂತ ಜಾಧವ, ವಾರ್ಡ್‌ ನಂಬ‌ರ್ 41 ರ ಸದಸ್ಯ ಮಂಗೇಶ ಪವಾ‌ರ್ ತಮ್ಮ ರಾಜಕೀಯ ಪ್ರಭಾವದಿಂದ ತಿನಿಸು ಕಟ್ಟೆಯಲ್ಲಿ ತಮ್ಮ ಕುಟುಂಬದವರಿಗೆ ಮಳಿಗೆ ನೀಡಿದ್ದಾರೆ. ತಕ್ಷಣ ಅವರನ್ನು ಪಾಲಿಕೆ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ಈ ವಿಷಯದ ಕುರಿತು ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ತಕ್ಷಣವೇ ಜಿಲ್ಲಾಧಿಕಾರಿಗಳು ಪಾಲಿಕೆಗೆ ನೋಟಿಸ್ ಜಾರಿ ಮಾಡಿ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರ ಅನರ್ಹತೆ ಕುರಿತು ಕೇಳಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿದ ಜಯಂತ ಜಾಧವ, ಮಂಗೇಶ ಪವಾರ್ ಇಬ್ಬರೂ ಮಹಾನಗರ ಪಾಲಿಕೆಯ ಸದಸ್ಯರನ್ನು ಅನರ್ಹಗೊಳಿಸಿ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ನೋಟೀಸ ನೀಡಿದ್ದಾರೆ.