ಬೆಳಗಾವಿ,: ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಟಾರ್ಟ್-ಅಪಗಳಿಗೆ ಬೆಂಬಲ ಮತ್ತು ಪೋಷಣೆಯ ವಾತಾವರಣವನ್ನು ಸೃಷ್ಟಿಸಲು ಕಾಹೆರ ಮುಂದಡಿ ಇಟ್ಟಿದ್ದು, ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವಿನ್ಯಭರಿತ ಉತ್ಪನ್ನ ಹಾಗೂ ಸೇವೆಗಳನ್ನು ಅಭಿವೃದ್ದಿಪಡಿಸಲು ಮತ್ತು ಪೂರೈಸಲು ಇಚ್ಚಿಸುವವರಿಗೆ ಸಹಾಯ ಹಸ್ತ ಚಾಚಲಿದ್ದು, ನೂತನವಾಗಿ ಪ್ರಾರಂಭಿಸುವ ವೈದ್ಯಕೀಯ ತಂತ್ರಜ್ಙಾನ ಸ್ಟಾರ್ಟಅಪಗಳಿಗೆ ಧನಸಹಾಯ ಹಾಗೂ ಮಾರುಕಟ್ಟೆಯನ್ನು ಕಲ್ಪಿಸಲು ಕಾಹೆರ ಇನ್ಕ್ಯುಬೇಶನ ಮತ್ತು ಇನ್ನೋವೇಶನ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.
ನಗರದ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅನೇಕ ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅದನ್ನು ತಪ್ಪಿಸಲು ವೈದ್ಯಕೀಯ ತಂತ್ರಜ್ಞಾನ ಆಧಾರಿತ ಉದ್ದಿಮೆಗಳು ಸ್ಥಾಪಿತವಾಗಬೇಕು. ನಮ್ಮಲ್ಲಿರುವ ಪ್ರತಿಭೆಗಳಿಗೆ ಅವಕಾಶ ಸಿಕ್ಕು ಉದ್ಯಮಿಗಳಾಗಬೇಕು ಎಂಬ ಸದುದ್ದೇಶವನ್ನಿಟ್ಟುಕೊಂಡು ಇನ್ಕ್ಯುಬೇಶನ ಮತ್ತು ಇನ್ನೋವೇಶನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಅಲ್ಲದೇ ಪ್ರತಿಭೆಯನ್ನು ಆಕರ್ಷಿಸಿ ಅದನ್ನು ಬಲಪಡಿಸುವುದು, ವಾಣಿಜ್ಯೀಕರಣ, ಸಂಶೋಧನಾ ಸೇರಿದಂತೆ ಸ್ಠಾರ್ಟ ಅಪ್ ಗಳ ಬಹುಉದ್ದೇಶಿತ ಕಾರ್ಯಗಳಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.
ದೇಶದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸುವಲ್ಲಿ ಕಾಹೆರನ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ. ಸ್ಟಾರ್ಟ ಅಪಗಳಿಗೆ ಶೈಕ್ಷಣಿಕ ಸಂಪನ್ಮೂಲ, ಅಗತ್ಯ ಮಾಹಿತಿ, ಮಾರ್ಗದರ್ಶನ, ನೆಟ್ವರ್ಕಿಂಗ್, ಪರಿಣತಿ ಮತ್ತು ಅನುಭವಿ ವೃತ್ತಿಪರರಿಂದ ಸಹಕಾರ ಸಿಗಲಿದೆ. ಕೆಐಐಸಿ ನಿಧಿ ಸಂಗ್ರಹ, ಸಾಮಾಜಿಕ ಜವಾದ್ಬಾರಿ, ಸೇರಿದಂತೆ ಅನೇಕ ರೀತಿಯ ಬೆಂಬಲವನ್ನು ಕಾಹೇರ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಕೇಂದ್ರವು ಒದಗಿಸಲಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಯ ಬದಲಾವಣೆಗೆ ಅನುಗುಣವಾಗಿ ಮೆಡ್-ಟೆಕ್ ಸ್ಟಾರ್ಟ ಅಪ್‌ಗಳಿಗೆ ಸಂಪನ್ಮೂಲ ಕಲ್ಪಿಸುವದರೊಂದಿಗೆ ಹೊಸ ಮೆಡ್ ಟೆಕ್ ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕರಣಗೊಳಿಸಿ, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ವಿವರಿಸಿದರು.
ಭಾರತೀಯ ಆರೋಗ್ಯ ರಕ್ಷಣೆಯಲ್ಲಿ ವಿಶೇಷವಾಗಿ ವೈದ್ಯಕೀಯ ಸಲಕರಣೆ ಉದ್ಯಮದಲ್ಲಿ ಬದಲಾವಣೆ ತರಲು ಅವಕಾಶವನ್ನು ಒದಗಿಸುತ್ತದೆ. ಕೆಐಐಸಿ ಈ ಭಾಗದಲ್ಲಿ ಪ್ರಥಮ. ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಕಾರ್ಪೊರೇಟ್ಗಳಿಗೆ ಹೂಡಿಕೆ ಮತ್ತು ಅನುದಾನದ ಅವಕಾಶ. ಸರ್ಕಾರಿ ಅನುದಾನಗಳ ಅತ್ಯುತ್ತಮ ಬಳಕೆಯ ಜೊತೆಗೆ ದ್ವೀತೀಯ ಹಂತದ ನಗರಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಬೆಳಗಾವಿ ಕೇಂದ್ರಿತ ಸ್ಟಾರ್ಟ್-ಅಪಗಳಿಗೆ ನಾವೀನ್ಯತೆ ಮತ್ತು ಹೂಡಿಕೆ ಆಕರ್ಷಿಸಲು ಸಹಾಯವನ್ನು ಕಲ್ಪಿಸಲಿದೆ. ಮೇಕ್ ಇನ್ ಇಂಡಿಯಾ ಕಲ್ಪನೆಯಡಿ ದೇಶದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದರು.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸಲಿದ್ದು ಹೊಸ ಉತ್ಪನ್ನಗಳು ಮತ್ತು ಸೇವೆಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಠಿಸಬಹುದು. ಸುಧಾರಿತ ಆರೋಗ್ಯ ಮತ್ತು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ನೀಡುವದಾಗಿದೆ. ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು, ಅಭಿವೃದ್ದಿಹೊಂದಲು ಮತ್ತು ಯಶಸ್ವಿಯಾಗಲು ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸಲು ವೇದಿಕೆಯನ್ನು ಕಲ್ಪಿಸುತ್ತದೆ. ಅಲ್ಲದೇ
ಕೆಐಐಸಿಯು ಐಐಟಿ ಕಾನ್ಪುರ ಮತ್ತು ಇತರರೊಂದಿಗೆ ಪಾಲುದಾರಿಕೆಯನ್ನು ಒಡಂಡಿಕೆ ಮಾಡಿಕೊಳ್ಳಲಾಗುತ್ತಿದೆ. ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ, ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಸಂಶೋಧನಾ ನಿರ್ದೇಶಕರಾದ ಡಾ. ಶಿವಪ್ರಾಸದ ಗೌಡರ ಸಿಎ ಡಾ. ಅಪೂರ್ವಾ ಪಟ್ಟಣಶೆಟ್ಟಿ ಯೋಗೇಶ ಕುಲಕರ್ಣಿ ಅವರು ಉಪಸ್ಥಿತರಿದ್ದರು.