ಬೆಂಗಳೂರು : ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರು ಬದಲಾವಣೆ ಮಾಡಲು ರಾಜ್ಯ ಆಹಾರ ಇಲಾಖೆಯು ಅವಕಾಶ ಮಾಡಿಕೊಟ್ಟಿದ್ದು, ಆಯಾ ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಪಡಿತರ ಚೀಟಿಯಲ್ಲಿ ಹಿರಿಯ ಮಹಿಳಾ ಸದಸ್ಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ ಅವಶ್ಯವಿರುವ ಮಾಹಿತಿಯನ್ನು ಸಲ್ಲಿಸಿ. ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ತಿದ್ದುಪಡಿ/ ಸೇರ್ಪಡೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ತಮ್ಮ ಪಡಿತರ ಚೀಟಿಗೆ ಸಂಬಂಧಿಸಿದ ಕುಂದು ಕೊರತೆಗಳಿಗೆ ಆಯಾ ತಾಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಸಂಪರ್ಕಿಸಲು ತಿಳಿಸಿದೆ.

ಹೊಸ ಪಡಿತರ ಚೀಟಿ ಸದ್ಯಕ್ಕಿಲ್ಲ:

ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಸೇವೆಯು ಸದ್ಯಕ್ಕೆ ಸ್ಥಗಿತಗೊಂಡಿದೆ. ಆದ್ದರಿಂದ  ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.

ನಿಯಮ?

ಪುರುಷರು ಕುಟುಂಬದ ಮುಖ್ಯಸ್ಥರಾಗಿದ್ದಲ್ಲಿ ಅಂತಹ ಕುಟುಂಬದ ಮುಖ್ಯಸ್ಥರನ್ನಾಗಿ ಮಹಿಳೆಯ ಆಯ್ಕೆ ಹಾಗೂ ಸಂಬಂಧಗಳು ತಪ್ಪಾಗಿ ನಮೂದಾಗಿದ್ದಲ್ಲಿ ತಿದ್ದುಪಡಿ, ಪಡಿತರ ಚೀಟಿಯಲ್ಲಿ ಮರಣ ಹೊಂದಿರುವ ಸದಸ್ಯರ ಹೆಸರನ್ನು ತೆಗೆಯಲು ನ್ಯಾಯಬೆಲೆ ಅಂಗಡಿ ಇ-ಕೆವೈಸಿ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಪಡಿತರ ಪಡೆಯದೇ ಇದ್ದ ಎಪಿಎಲ್‌ ಕಾರ್ಡುದಾರರು ಇದೀಗ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರುತ್ತಿದಂತೆಯೇ ಎಚ್ಚೆತ್ತುಕೊಂಡಿದ್ದು, ಪಡಿತರ ಪಡೆಯದ ಕಾರಣ ರೇಷನ್‌ ಕಾರ್ಡಿಗೆ ಆಧಾರ್‌ ಕಾರ್ಡ್‌ ಕೂಡಾ ಲಿಂಕ್‌ ಮಾಡಿಸಿರಲಿಲ್ಲ. ಆದರೆ, ಈಗ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ಕಾರಣ ಎಪಿಎಲ್‌ ಕಾರ್ಡ್‌ದಾರರು ಕೂಡಾ ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಹಾಗೂ ಮನೆಯೊಡತಿ ಹೆಸರು ಬದಲಾವಣೆ ಮಾಡಿಸಲು ದೌಡಾಯಿಸುತ್ತಿದ್ದಾರೆ.

ಸದ್ಯ ತಿದ್ದುಪಡಿಗೆ ಸರ್ವರ್‌ ಸೇರಿದಂತೆ ಯಾವುದೇ ತಾಂತ್ರಿಕ ತೊಡಕುಗಳು ಸಂಭವಿಸಲಿಲ್ಲ. ಹೀಗಾಗಿ ಒಂದೆಡೆ ಸರಾಗವಾಗಿ ತದ್ದುಪಡಿ ನಡೆಯುತ್ತಿದ್ದರೆ ಇನ್ನೊಂದೆಡೆ ದಾಖಲೆಗಳೊಂದಿಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗುತಿತ್ತು. ಯೋಜನೆಯ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಇಲ್ಲದಿದ್ದರೂ ಸರಿಯಾದ ಮಾಹಿತಿ ಇಲ್ಲದೇ ಸಾರ್ವಜನಿಕರು ಗ್ರಾಮ ಒನ್‌ ಹಾಗೂ ಕರ್ನಾಟಕ ಒನ್‌ ಕೇಂದ್ರಗಳಲ್ಲಿಮುಗಿ ಬೀಳುತ್ತಿದ್ದಾರೆ. ಜತಗೆ ಆಧಾರ್‌ ನೋಂದಣಿಗೂ ಜನದಟ್ಟಣೆ ಪ್ರಾರಂಭವಾಗಿದೆ.