ಬೆಳಗಾವಿ,:ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗದ ಭೂಸ್ವಾಧೀನ ಕಳೆದ ಐದು ತಿಂಗಳುಗಳಲ್ಲಿ ವೇಗವಾಗಿ ನಡೆದಿದ್ದು, ರೇಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಸನ್ನಿಹಿತವಾಗಿದೆ. ಅಲ್ಲದೇ ಒಂದೇ ತಿಂಗಳಲ್ಲಿ ಕಾಮಗಾರಿಗೆ ಟೆಂಡರ ಕರೆಯಲಿದೆ ರೇಲ್ವೆ ಇಲಾಖೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ರೈಲು ಮಾರ್ಗವು ದೇಸೂರು ನಿಲ್ದಾಣವು ಜಂಕ್ಷನವಾಗಲಿದ್ದು,
ಅಗತ್ಯವಿರುವ ಒಟ್ಟು 1,200 ಎಕರೆಗಳಲ್ಲಿ 600 ಎಕರೆಗಳಂತೆ ಎರಡು ಹಂತಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಂದು ತಿಂಗಳೊಳಗೆ, ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಸರಿಸುಮಾರು 700 ಎಕರೆಗಳಷ್ಟು ಉಳಿದ ಭೂಸ್ವಾಧೀನ ಕಾರ್ಯವೂ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ಕಿತ್ತೂರು ಮೂಲಕ ಹಾದುಹೋಗುವ 73 ಕಿ.ಮೀ ರೈಲು ಮಾರ್ಗವನ್ನು ಭಾರತೀಯ ರೈಲ್ವೆ ಮತ್ತು ಕರ್ನಾಟಕ ಸರ್ಕಾರದ ನಡುವೆ ವೆಚ್ಚ ಹಂಚಿಕೆ ಆಧಾರದ ಮೇಲೆ ಅನುಮೋದಿಸಲಾಗಿದೆ. ಭೂಸ್ವಾಧೀನ ಅಂತಿಮಗೊಂಡ ನಂತರ, ರೈಲ್ವೆ ಇಲಾಖೆ ತಕ್ಷಣವೇ ಟೆಂಡರ್ ಕರೆಯುವ ಮತ್ತು ವಿಳಂಬ ಮಾಡದೇ ಭೂಮಾಲೀಕರಿಗೆ ಪರಿಹಾರ ನೀಡಲು ಪ್ರಾರಂಭಿಸುವ ನಿರೀಕ್ಷೆಯಿದೆ.
ಹೊಸ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗವು
1) ಬೆಳಗಾವಿ 2) ದೇಸೂರು 3) ಕನ್ವಿಕರ್ವಿನ್ಕೊಪ್ಪ 4) ಬಾಗೇವಾಡಿ 5) ಎಂ.ಕೆ. ಹುಬ್ಬಳ್ಳಿ 6) ಹುಲಿಕಟ್ಟಿ 7) ಕಿತ್ತೂರು 8) ತೇಗೂರು 9) ಮಮ್ಮಿಗಟ್ಟಿ 10) ಕ್ಯಾರಕೊಪ್ಪ 11) ಧಾರವಾಡ ಹೀಗೆ 11 ನಿಲ್ದಾಣಗಳನ್ನು ಹೊಂದಿದೆ ಎಂದು ತಿಳಿಸಿದರು.
ಬೆಳಗಾವಿ-ಧಾರವಾಡ ರೇಲ್ವೆ ಮಾರ್ಗ : ತಿಂಗಳೊಳಗೆ ಕಾಮಗಾರಿಗೆ ಟೆಂಡರ
