ಬೆಳಗಾವಿ: ಇನ್ನೂ ಹೆಸರಿಡದ 6,067 ಮೀಟರ್‌ ಎತ್ತರದ ಶಿಖರವನ್ನು ಏರುವಲ್ಲಿ ಬೆಳಗಾವಿಯ ಪರ್ವತಾರೋಹಿ ಪ್ರಕೃತಿ ರಮೇಶ ಅಲಗೂಡೇಕರ ಅವರು ಸಾಧನೆಯ ಶಿಖರವನ್ನೇರಿದ ದೇಶದ ಮೊದಲ ಮಹಿಳೆ ಎಂಬ ಕಿರಿಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಸ್ಪಿತಿ ಜಿಲ್ಲೆಯ ಲಾಹುಲ್ ಎಂಬ ಪ್ರದೇಶದಲ್ಲಿರುವ ಈ ಶಿಖರವನ್ನು. ಪ್ರಕೃತಿ ಜೊತೆಗೂಡಿ ಎಂಟು ಜನರ ಪರ್ವತಾರೋಹಿಗಳ ತಂಡವು ಸೆ.3ರಂದು ಆರೋಹಣ ಆರಂಭಿಸಿ, ಸೆ.14ರಂದು ಉತ್ತುಂಗ ತಲುಪಿತು. ಅಲ್ಲಿ ಭಾರತದ ಧ್ವಜ ಹಾರಿಸಿದ ಪ್ರಕೃತಿ ಅವರು, ಸಾಧನೆಯ ಮೈಲುಗಲ್ಲು ನಿರ್ಮಿಸಿದರು. ಅತ್ಯಂತ ದುರ್ಗಮ ಹವಾಮಾನದ ಈ ಶಿಖರವು ಕನಿಷ್ಠ 60 ಡಿಗ್ರಿಯಿಂದ 90 ಡಿಗ್ರಿಯಷ್ಟು ಕಡಿದಾಗಿದೆ. ಆಹಾರ ನೀರು ಇಲ್ಲದೇ ಪ್ರತಿ ದಿನ 12 ತಾಸು ಶಿಖರ ಏರುವುದು ಸವಾಲೇ ಸರಿ. ಅಚಲವಾದ ನಿರ್ಣಯ ತೆಗೆದುಕೊಂಡ ನಾನೂ ಹಾಗೂ ಸಹವರ್ತಿಗಳು, ಶಿಖರ ಏರುವ ಸವಾಲು ಎದುರಿಸಿದೆವು. ಕಡಿದಾದ ಕಣಿವೆಗಳು, ಗಗನ ಚುಂಬಿಸುವಂಥ ಪರ್ವತ, ಹಿಮಪಾತ, ಆಮ್ಲಜನಕದ ಕೊರತೆಯಂಥ ಸವಾಲುಗಳನ್ನೂ ಮೆಟ್ಟಿ ಮುನ್ನಡೆದೆವು. ಶಿಖರದ ಗುರಿ ಮುಟ್ಟಿದಾಗ ಸಂಭ್ರಮಿಸಿದೆವು. ಹಿಮಚ್ಛಾದಿತ ಪರ್ವತದ ಮೇಲೆ ಹೆಜ್ಜೆ ಗುರುತು ಮೂಡಿಸಿ ಸಂಭ್ರಮಿಸಿದ್ದಾರೆ.