ಬೆಳಗಾವಿ,: ಬೆಳಗಾವಿಯ ಕೆಎಲ್ಇ ಡಾ. ಎಂ.ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಾಜಿಯ ಸಾಹಿಲ್ ಎಂ. ಸೋಮನಾಚೆ ಅವರು ಸಿವಿಲ್ ಇಂಜಿನಿಯರಿಂಗನಲ್ಲಿ 12 ಚಿನ್ನದ ಪದಕ ಬಾಚಿಕೊಂಡಿದ್ದಾನೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ ಭಾಗ -1 ರ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ ಗೆಹ್ಲೊಟ್ ಅವರಿಂದಿಲ್ಲಿ ಪ್ರದಾನ ಮಾಡಿದರು.

ಬೆಂಗಳೂರಿನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಜಿ.ವಿಷ್ಣುಪ್ರಿಯಾ ಅವರು ಕಂಪ್ಯೂಟರ ಸೈನ್ಸನಲ್ಲಿ 10, ಎಸ್ ಜೆ.ಬಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿಯ ರೇಷ್ಮಾ ಜಿ. ಅವರು,  ಎಲೆಕ್ಟ್ರಾನಿಕ್ಸ ಮತ್ತು ಕಮ್ಯೂನಿಕೇಷನನಲ್ಲಿ 7, ಮೋಹನಕುಮಾರ ಎಲ್ ಅವರು ಮೆಕ್ಯಾನಿಕಲ್ಸನಲ್ಲಿ 7, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಕೃತಿಕಾ ಸೆಂಥಿಲ್ ಅವರು ಮಾಹಿತಿ ವಿಜ್ಞಾನದಲ್ಲಿ 4, ಆರ್.ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಅನುಶ್ರೀ ಪಿ ಅವರು ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನಲ್ಲಿ 4, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಹೃತಿಕಾ ಜಿ. ಅವರು ಎಲೆಕ್ಟ್ರಿಕಲ್ಸ್  ಮತ್ತು ಎಲೆಕ್ಟ್ರಾನಿಕ್ಸನಲ್ಲಿ 7, ಕೆ.ಜಿ.ಎಫ್.ನ ಡಾ.ಟಿ.ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಮಾಲತೇಶ ಎನ್ ಅವರು ಮೈನಿಂಗ್ ಇಂಜನಿಯರಿಂಗನಲ್ಲಿ 2, ದಾವಣೆಗೆರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಜನನಿ ಡಿ. ಅವರು, ಬಯೋ-ಟೆಕ್ನಾಲಾಜಿಯಲ್ಲಿ 2 ಹಾಗೂ ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಸೌರವ ವಿ.ಇಂಗಲ್ ಅವರು  2 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದು,

ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ:

ಚಿಕ್ಕಬಳ್ಳಾಪುರದ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಧುಸೂಧನ್ ಸಾಯಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಸೊಮನಾಥ್, ಬೆಂಗಳೂರ ಇಂಟರನ್ಯಾಷನಲ್ ಏರ್ ಪೋರ್ಟ ಲಿ.ವ್ಯವಸ್ಥಾಪನಾ ನಿರ್ದೆಶಕರು ಹಾಗೂ ಸಿ.ಇ.ಓ ಆದ ಹರಿ ಕೆ ಮರಾರ್ ಅವರುಗಳಿಗೆ ಡಾಕ್ಟರ್ ಆಫ್ ಸೈನ್ಸ ಗೌರವ ಪದವಿಯನ್ನು  ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಪ್ರದಾನ ಮಾಡಿದರು.

ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ ಉಪಸ್ಥಿತರಿದ್ದರು.