ಬೆಳಗಾವಿ : ಬಿಸಿಲಿನ ಜಳದಿಂದ ಬೇಸತ್ತಿದ್ದ ಜನಕ್ಕೆ ಶನಿವಾರ ಸುರಿದ ಧಾರಾಕಾರ ಮಳೆಯಿಂದ ಕೊಂಚ ನೆಮ್ಮದಿ ತಂದಿದೆ.
ಸಂಜೆ ಸುಮಾರಿಗೆ ಸುರಿದ ಮಳೆಯಿಂದ ಬೆಳಗಾವಿ ಜನ ತೊಂದರೆಗೊಳಗಾದರು. ಶುಕ್ರವಾರವೂ ಬೆಳಗಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಸತತವಾಗಿ ಎರಡನೇ ದಿನವೂ ಬೆಳಗಾವಿಯಲ್ಲಿ ಧಾರಾಕಾರ ಮಳೆ ಬಿದ್ದಿದೆ.
ಬೆಳಗಾವಿಯಲ್ಲಿ ಇಂದು ರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ನಿಮಿತ್ತ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೂ ಮುನ್ನ ಸಂಜೆ ಸುಮಾರಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಮಹಾನಗರದ ಚರಂಡಿಗಳು ತುಂಬಿ ಹರಿದು ರಸ್ತೆ ಮೇಲೆಯೇ ನೀರು ಹರಿದಿದೆ.
