ಬೆಳಗಾವಿ: ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ. ಯಾವ ಪಕ್ಷದಿಂದ ಬರುತ್ತಾರೆ ಅನ್ನುವುದಕ್ಕಿಂತ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೆಳಗಾವಿ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್ ಬಂದಾಗ ನಾವು ಗೌರವ ಕೊಟ್ಟಿದ್ದೇವೆ. ಈಗ ಬಿಜೆಪಿಗೆ ಹೋಗಿದ್ದು ಅವರ ವೈಯಕ್ತಿ ವಿಚಾರ. ಇನ್ನು ಬೆಳಗಾವಿ ಬಿಜೆಪಿ ಟಿಕೆಟ್ ಪಡೆದ ಜಗದೀಶ್ ಶೆಟ್ಟರ್ ಅವರ ಬಗ್ಗೆ ಚರ್ಚಿಸುವ ಅವಶ್ಯಕತೆ ನಮಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಅಷ್ಟೇ ನಮ್ಮ ಗುರಿ ಎಂದು ತಿಳಿಸಿದರು.
ಚಿಕ್ಕೋಡಿಯಲ್ಲಿ ಶಂಭು ಕಲ್ಲೋಳಕರ್ ಅವರ ಸಭೆ, ಮಾಜಿ ಶಾಸಕ ರಮೇಶ ಕುಡಚಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್, ಶಂಭು ಕಲ್ಲೋಳಕರ್ ಬಂಡಾಯ ಅಭ್ಯರ್ಥಿ ಅಲ್ಲ. ಅವರು ಸಭೆ ನಡೆಸುತ್ತಿರುವ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಮತ್ತು ಶಂಭ ಕಲ್ಲೋಳಕರ್ ಅವರಿಗೆ ಸಂಬಂಧವಿಲ್ಲ. ಇನ್ನು ವಿಧಾನಸಭೆ ಚುನಾವಣೆ 6 ತಿಂಗಳ ಇರುವಾಗ ಬಂದು ಟಿಕೆಟ್ ಕೇಳಿದ್ದಾರೆ. ಹೀಗಾಗಿ ಕೊಟ್ಟಿಲ್ಲ. ಮುಂದೆಯೂ ರಾಯಬಾಗ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆಯೇ ಟಿಕೆಟ್ ನೀಡುತ್ತೇವೆ. ಇನ್ನು ಚುನಾವಣೆ ನಾಲ್ಕು ವರ್ಷ ಇರುವಾಗಲೇ ಹೇಳುತ್ತಿದ್ದೇನೆ ಎಂದರು
ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವುದಷ್ಟೇ ನಮ್ಮ ಗುರಿ: ಸತೀಶ್ ಜಾರಕಿಹೊಳಿ
