ಬೆಳಗಾವಿ:ಕ್ಯಾನ್ಸರ ಎಂದರೆ ಅದೇನ ಯುದ್ದವಲ್ಲ. ಅದಕ್ಕೆ ಧೃತಿಗೆಡದೇ ಸರಿಯಾದ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು. ಈಗಿನ ಔಷಧಗಳು ಕೂಡ ಬಹಳ ಪ್ರಬಲವಾಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಇದೆ. ಮಕ್ಕಳಿಗೆ ನೀಡುವ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣಗೊಳಿಸಬೇಕು. ಅದಕ್ಕೆ ಪಾಲಕರು ಕೂಡ ಸಹಕಾರ ನೀಡಬೇಕು ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರಿಂದಿಲ್ಲಿ ಹೇಳಿದರು.
ಅಂತರಾಷ್ಟ್ರೀಯ ಚಿಕ್ಕಮಕ್ಕಳ ಕ್ಯಾನ್ಸರ ದಿನಾಚರಣೆ ಅಂಗವಾಗಿ ದಿ. 15 ಫೆಬ್ರುವರಿ 2024ರಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ ವಿಭಾಗವು ಏರ್ಪಡಿಸಿದ್ದ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಮಕ್ಕಳಲ್ಲಿರುವ ಕ್ಯಾನ್ಸರಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಸುಲಭ ಚಿಕಿತ್ಸೆ ಲಭಿಸುತ್ತಿರುವದರಿಂದ ಗುಣಮುಖಪಡಿಸಲು ಸಾಧ್ಯವಿದೆ. ಕರ್ಚುವೆಚ್ಚ ಭರಿಸಲು ಸಂಘ ಸಂಸ್ಥೆಗಳಿವೆ ಅವುಗಳ ಸದುಪಯೋಗವನ್ನು ಪಡೆದುಕೊಂಡು ಮಕ್ಕಳನ್ನು ಆರೈಕೆ ಮಾಡಬೇಕು. ಮಕ್ಕಳ ಆರೈಕೆಯು ಅತ್ಯಂತ ಸೂಕ್ಷ್ಮವಾಗಿದ್ದು ಅವರನ್ನು ಅರಿತುಕೊಂಡು ಚಿಕಿತ್ಸೆ ನೀಡುವದು ಕಠಿಣ. ಆದರೂ ಕೂಡ ಇಲ್ಲಿ ಅತ್ಯುತ್ತಮವಾದ ಚಿಕಿತ್ಸೆ ಲಭಿಸುತ್ತಿದೆ ಎಂದು ತಿಳಿಸಿದರು.
ಆರ್ಥಿಕ ತೊಂದರೆ ಇರುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಅಪಾರ ಕಾಳಜಿ ವಹಿಸುವ ಡಾ. ಅಭಿಲಾಷಾ ಅವರು ಅನೇಕ ಸಂಘಸAಸ್ಥೆಗಳ ಮೊರೆ ಹೋಗಿ ಮಕ್ಕಳ ಕಾಳಜಿ ವಹಿಸಿಕೊಳ್ಳುತ್ತಿದ್ದಾರೆ. ಅತ್ಯುತ್ತಮವಾದ ಚಿಕಿತ್ಸೆ ನೀಡುವಲ್ಲಿ ಸಹಕರಿಸುತ್ತಿರುವ ಮುಖ್ಯವಾಗಿ ಪಾಲಕರಿಗೆ, ಮಕ್ಕಳಿಗೆ, ವೈದ್ಯರನ್ನು ಅಭಿನಂದಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ. ದಯಾನಂದ ಅವರು ಮಾತನಾಡಿ, ಕ್ಯಾನ್ಸರ ಪೀಡಿತ ಮಕ್ಕಳಿಗೆ ಗುಣಮಟ್ಟದ ಅತ್ಯಾಧುನಿಕ ಚಿಕಿತ್ಸೆ ನೀಡಲು ಅವಶ್ಯವಿರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆಸ್ಪತ್ರೆಯ ನರ್ಸಿಂಗ ಸಿಬ್ಬಂದಿಗೆ ಅವಶ್ಯವಿರುವ ತರಬೇತಿಗಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಕ್ಯಾನ್ಸರ ರೋಗವನ್ನು ಪ್ರಥಮ ಹಂತದಲ್ಲಿರುವಾಗಲೇ ಪತ್ತೆ ಹಚ್ಚಿ, ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ ಆಸ್ಪತ್ರೆ ಕರ‍್ಯನಿರ್ವಹಿಸಲಿದೆ. ಇದರಿಂದ ಅನೇಕ ವಿಧವಾದ ಚಿಕಿತ್ಸೆಗಳು ಒಂದೆ ಸೂರಿನಲ್ಲಿ ಸಿಗಲಿವೆ ಎಂದು ತಿಳಿಸಿದರು.
ಬಾಲ ಕ್ಯಾನ್ಸರ ತಜ್ಞವೈದ್ಯರಾದ ಡಾ. ಅಭಿಲಾಷಾ ಸಂಪಗಾರ ಅವರು ಮಾತನಾಡಿದರು. ವೇದಿಕೆ ಮೇಲೆ ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಡಾ. ಸುಜಾತಾ ಜಾಲಿ, ಡಾ. ಜ್ಞಾನೇಶ ಕಾಂಬಳೆ ಉಪಸ್ಥಿತರಿದ್ದರು. ಡಾ.ಸನಾ ನಿರೂಪಿಸಿದರು.
ಸರಿಯಾದ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರು
