ಬೆಳಗಾವಿ, ಅತ್ಯಧಿಕ ಕೊಲೆಸ್ಟರಾಲ್‌, ರಕ್ತದೊತ್ತಡ ಸೇರಿದಂತೆ ದೀರ್ಘಕಾಲದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಳವಡಿಸಿಕೊಂಡಿರುವ ‘ದಿನನಿತ್ಯದ ಮಾತ್ರೆ’ ಸೇವನೆಯ ಚಿಕಿತ್ಸೆಗೆ ಭವಿಷ್ಯದಲ್ಲಿ ಸ್ಥಗಿತಗೊಳ್ಳುವ ಸಂದರ್ಭ ಬಂದೊದಗಲಿದೆ.ಕೊಲೆಸ್ಟರಾಲ್‌, ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಔಷಧವು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಲಬ್ಯವಿದೆ.

ಡಿಸಿಜಿಐ, ಯುಎಸ್ ಎಫ್‌ಡಿಎ, ಸಿಇ ಹಾಗೂ ಇಎಂಎ ಅನುಮೋದಿತ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಲಿಪಿಡ್ ಕಡಿಮೆಗೊಳಿಸುವ ಸುರಕ್ಷಿತ ಚಿಕಿತ್ಸೆಯಾಗಿದ್ದು, ಕೇವಲ ಚುಚ್ಚುಮದ್ದಿ (ಇಂಜೆಕ್ಷನ್) ನೊಂದಿಗೆ ಈ ಔಷಧವು 6 ತಿಂಗಳವರೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಶೇ.50ರಷ್ಟು ಕಡಿಮೆಗೊಳಿಸುತ್ತದೆ.

ಕಳೆದ 25 ವರ್ಷಗಳಿಂದ ಬಳಕೆಯಲ್ಲಿವೆ ಮತ್ತು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಹೃದಯಾಘಾತ, ಪಾರ್ಶ್ವವಾಯು, ಆಂಜಿಯೋಪ್ಲ್ಯಾಸ್ಟಿ ಮತ್ತು ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆಯ ಅಗತ್ಯವನ್ನು 50% ವರೆಗೆ ಕಡಿಮೆ ಮಾಡಲು, ಕೊಲೆಸ್ಟಾçಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಇನ್‌ಕ್ಲಿಸಿರಾನ ಅನ್ನು ಪ್ರಸ್ತುತ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದರ ಕುರಿತು ಸುಮಾರು 30 ಕ್ಕೂ ಹೆಚ್ಚು ಪ್ರಮುಖ ಸಂಶೋಧನಾ ಅಧ್ಯಯನಗಳಲ್ಲಿ ಸಾಕ್ಷಿಕರಿಸಿವೆ.

ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವ ಪ್ರಾಥಮಿಕ ಉದ್ದೇಶದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಔಷಧಿಗಳನ್ನು ಬಳಸಲಾಗುತ್ತದೆ ಎಂಬುದು ಅನೇಕ ರೋಗಿಗಳಿಗೆ ತಿಳಿದಿರುವುದಿಲ್ಲ. ಇನ್ಕ್ಲಿಸಿರಾನ್ ಸ್ಟ್ಯಾಟಿನ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ಸಂಶೋಧನೆಯೊಂದಿಗೆ ಇದು ಸ್ಟ್ಯಾಟಿನ್‌ಗಳನ್ನು ಬದಲಿಸುವ ಸಾಧ್ಯತೆಯಿದೆ ಎಂದು ಸಂಶೋಧಕರಾದ ಹೃದ್ರೋಗ ತಜ್ಞ ಡಾ.ಪ್ರಸಾದ್ ಎಂ.ಆರ್ ಅವರು ಹೇಳುತ್ತಾರೆ.

ಭಾರತದಲ್ಲಿ ಪ್ರಥಮವಾಗಿ ಈ ಚುಚ್ಚುಮದ್ದನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಡಾ. ಪ್ರಸಾದ್ ಎಂ.ಆರ್ ಅವರು ಬಳಸಿದ್ದು ಬೆಳಗಾವಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರು ಈಗಾಗಲೇ 100 ಅಧಿಕ ರೋಗಿಗಳಿಗೆ ಚುಚ್ಚುಮದ್ದು ನೀಡಿದ್ದು, ಇನ್‌ಕ್ಲಿಸಿರಾನ್‌ನ ಸುರಕ್ಷತೆಯ ಅನುಭವ ಮತ್ತು ವಿಶ್ವಾಸವಿದೆ. ಕಳೆದ 15 ವರ್ಷಗಳಿಂದ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ಇದರ ಬೆಲೆ ಸುಮಾರು ಲಕ್ಷಕ್ಕೂ ಅಧಿಕ ಬೆಲೆ ಹೊಂದಿದ್ದು, ಪೆಟೆಂಟ ಹಕ್ಕುಗಳನ್ನು ಕಳೆದುಕೊಂಡು ನಂತರ ಕೈಗೆಟಕುವ ದರದಲ್ಲಿ ಸಿಗಲಿದೆ.