ಪರಮಾನಂದವಾಡಿ : ಇಲ್ಲಿನ ಶ್ರೀ ಹಾಲಸಿದ್ದೇಶ್ವರ ಶಿಕ್ಷಣ ಸಂಸ್ಥೆ ಶಿರಗೂರ ಶ್ರೀ ಜೆ.ಪಿ. ಶಿರಗುರಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ 20,23- 24 ನೇ ಸಾಲಿನ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ ಜರುಗಿತು.
ಹಾರೂಗೇರಿಯ ಸಮಾಜ ಸೇವಕಿ ಚಂದ್ರಿಕಾ ಗದಗ ಮಾತನಾಡಿ, ಜಗತ್ತಿನಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಮಹಿಳೆ ಸ್ವತಂತ್ರವಾಗಿ ಜೀವಿಸುವ ಜೀವನ ರೂಪಿಸಿಕೊಳ್ಳಬೇಕು. ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಾತ್ಮಕ ಶಾಸನಗಳನ್ನು ಜಾರಿಗೆ ಮಾಡಿ ಅವರಿಗೆ ರಕ್ಷಣೆ ಕೊಡಬೇಕು. ಹಿಂದಿನ ಕಾಲದಲ್ಲಿ ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಬದುಕುವ ವಾತಾವರಣವಿತ್ತು. ಆಧುನಿಕ ಯುಗದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ಹೇಳಿದರು.
ಮಹಿಳಾ ಘಟಕದ ಸಂಯೋಜಕಿ ಡಾ. ಕವಿತಾ ಘಟಕಾಂಬಳೆ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಮಹಿಳೆಯರು ಪ್ರವೇಶ ಮಾಡದ ಕ್ಷೇತ್ರವಿಲ್ಲ. ಇವತ್ತಿನ ಸಮಾಜದಲ್ಲಿ ಮಹಿಳೆಯರು ನಿರ್ಭಿತರಾಗಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಗಟ್ಟಬೇಕಾದರೆ ಮಹಿಳೆಯರು ಧೈರ್ಯಶಾಲಿಯಾಗಿ ಇರಬೇಕು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.
ಡಾ.ರಾಜು ವಸಂತ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿಜಯ ವಸಂತ ದಳವಾಯಿ, ಉಪ ಪ್ರಾಚಾರ್ಯ ಅಶೋಕ ಶಿರಹಟ್ಟಿ, ಡಿ.ಎಂ.ದುರದುಂಡಿ, ಡಿ.ಕೆ.ಕಾಂಬಳೆ, ಆರ್.ಎಚ್. ನಾಯಕ್, ಚೇತನ್, ಮಾಂತೇಶ ಬಂತಿ, ಪಲ್ಲವಿ ಸೇಡಬಾಳೆ, ಎಸ್ .ಎಂ. ಪಾಟೀಲ, ಕೆ.ಎಲ್. ರಾಂಪುರೆ ಮುಂತಾದವರು ಹಾಜರಿದ್ದರು.
ಮಹಿಳೆಯರಿಗೆ ಉತ್ತಮ ಸ್ಥಾನಮಾನ ಸಿಗಬೇಕು: ಚಂದ್ರಿಕಾ
