ಜನ್ಮತಃವಾಗಿ ತೀವ್ರ ಹೃದಯರೋಗದಿಂದ ಬಳಲುತ್ತಿದ್ದ ಇರಾಕನ 30 ದಿನಗಳ ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವದಾನ ನೀಡಿದರೆ, ಗೋವಾದ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕೇವಲ 10 ದಿನದ ಹಸುಗೂಸಿಗೆ ಅಪಧಮನಿಗಳಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸಿ ಹೃದಯಕ್ಕೆ ಶುದ್ದವಾದ ರಕ್ತ ಸಂಚರಿಸುವಂತೆ ಮಾಡಿ ಆ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಹರಿಹಂತ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ಹೃದಯ ಹಾಗೂ ಶ್ವಾಸಕೋಶಕ್ಕೆ ಪರಿಚಲನೆಗೊಳ್ಳುವ ರಕ್ತನಾಳವು ಅದಲುಬದಲಾಗಿದ್ದ ಕಾರಣ ಮಗುವಿಗೆ ಶೀಘ್ರವೇ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಅವಶ್ಯಕತೆ ಇತ್ತು. ಇರಾಕನಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಹೃದಯಯದಲ್ಲಿ ತೊಧರೆ ಇರುವದನ್ನು ಕಂಡು ಹಿಡಿದು ಮಗುವಿಗೆ ಶೀಘ್ರವೇ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಅದರಲ್ಲಿಯೂ ಡಾ. ಎಂ ಡಿ ದಿಕ್ಷಿತ ಅವರು ಎತ್ತಿದ ಕೈ ಎಂದಾಗ ಇರಾಕನಿಂದ ಬೆಂಗಳೂರು ಮೂಲಕ ಬೆಳಗಾವಿಗೆ ಆಗಮಿಸಿದರು. ಶಸ್ತ್ರಚಿಕಿತ್ಸೆಯ ನಂತರ ಗುಣಮುಖಗೊಂಡ ಮಗುವನ್ನು ಮರಳಿ ಮನೆಗೆ ಕಳುಹಿಸಿಕೊಡಲಾಗಿದೆ
ಗೋವಾದ 10 ದಿನದ ಮಗು: ನವಜಾತ ಶಿಶು ತೀವ್ರ ಆರೋಗ್ಯದ ಸಮಸ್ಯೆಯಿಂದ ನರಳಲಾರಂಭಿಸಿತು. ಪೋಷಕರು ಮಗುವನ್ನು ಚಿಕಿತಸೆಗಾಗಿ ಗೋವಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಮಗುವಿನ ಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ತಪಾಸಿಸಿದಾಗ ಹೃದಯದಲ್ಲಿ ರಂದ್ರವಿದು, ಮಗುವಿನ ಮಹಾಪಧಮನಿಯು ದೇಹಕ್ಕೆ ರಕ್ತ ಪೂರೈಕೆಗೆ ಅಡ್ಡಿಯನ್ನುಂಟು ಮಾಡುತ್ತಿರುವದು ಕಂಡು ಬಂದಿತು. ಹೃದಯ ದುರ್ಬಲವಾಗುತ್ತ ಬಂದಿತು, ಇದರಿಂದ ಶಸ್ತ್ರಚಕಿತ್ಸೆ ಮೂಲಕ ಸರಿಪಡಿಸುವದು ಅನಿವಾರ್ಯವಾಯಿತು. ವೆಂಟಿಲೇಟರ ಜೊತೆಗೆ ಗೋವಾದಿಂದ ಮಗುವನ್ನು ಆಂಬ್ಯುಲೆನ್ಸ್ನಲ್ಲಿ ಅರಿಹಂತ ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆಗೊಳ್ಪಡಿಸಿದ ಡಾ. ಎಂ. ಡಿ. ದೀಕ್ಷಿತ ಅವರು ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಇದಾದ ನಂತರ ಮಗುವನ್ನು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಎಂ ಡಿ ದಿಕ್ಷಿತ ಅವರ ತಂಡವಾದ ಅಭಿಷೇಕ ಜೋಶಿ, ಡಾ. ಪ್ರಶಾಂತ ಎಂ. ಬಿ., ಡಾ. ಅವಿನಾಶ ಲೋಂಡೆ ಮತ್ತು ಸಹೋದ್ಯೋಗಿಗಳನ್ನು ಆಸ್ಪತ್ರೆಯ ಅಧ್ಯಕ್ಷ ಸಹಕಾರರತ್ನ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಉತ್ತಮ ಪಾಟೀಲ ಅವರು ಅಭಿನಂಧಿಸಿದ್ದಾರೆ.
